ಬೆಂಗಳೂರು : ಬೆಂಗಳೂರಿನಲ್ಲಿ ಇದೀಗ ಭಾರಿ ಮಳೆಯಾಗುತ್ತಿದ್ದು ಕಳೆದ ಕೆಲವು ದಿನಗಳಿಂದ ಮಹಾ ಮಳೆಗೆ ಹಲವರು ಬಲಿಯಾಗಿದ್ದಾರೆ. ಗೋಡೆ ಕುಸಿದು ವೈಟ್ ಫೀಲ್ಡ್ ಬಳಿ ಮನೆ ಗೋಡೆ ಕುಸಿದು ಮಹಿಳೆ ಒಬ್ಬರು ಸಾವನ್ನಪ್ಪಿದ್ದರೆ, ಇನ್ನೂ ಅಪಾರ್ಟ್ಮೆಂಟ್ ನಲ್ಲಿ ಬೇಸ್ಮೆಂಟ್ ನಲ್ಲಿರುವ ನೀರು ಹೊರ ಹಾಕುವಾಗ ವಿದ್ಯುತ್ ಶಾಕ್ ನಿಂದ ಇಬ್ಬರು ಸಾವನಪ್ಪಿದ್ದರು. ಇದೀಗ ಬೈಕ್ ನಲ್ಲಿ ತೆರಳುವಾಗ ಮರ ಬಿದ್ದು ಸವಾರ ಒಬ್ಬರು ಸಾವನಪ್ಪಿದ್ದಾರೆ.
ಹೌದು ಬೆಂಗಳೂರಿನಲ್ಲಿ ಮಹಾಮಳೆಗೆ ಇದೀಗ ಮತ್ತೊಂದು ಬಲಿಯಾಗಿದೆ. ಬೈಕ್ ನಲ್ಲಿ ತೆರಳುತ್ತಿದ್ದಾಗ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕೋರಮಂಗಲದಲ್ಲಿ ಮರ ಉರುಳಿ ಬಿದ್ದು 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆಡುಗೋಡಿ ನಿವಾಸಿ ಮೂಡಲಗಿರಿ (50) ಮೃತ ದುರ್ದೈವಿ ಎಂದು ತಿಳಿದುಬಂದಿದೆ.