ಕಲಬುರ್ಗಿ : ರಾಜ್ಯದಲ್ಲಿ ಇದೀಗ ಭಾರಿ ಮಳೆ ಆಗುತ್ತಿದ್ದು ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಇದುವರೆಗೂ ರಾಜ್ಯದಲ್ಲಿ ಮಹಾಮಳೆಗೆ ಒಟ್ಟು ಐದು ಜನರು ಬಲಿಯಾಗಿದ್ದಾರೆ. ಇದೀಗ ಕಲ್ಬುರ್ಗಿಯಲ್ಲಿ ಸಿಡಿಲು ಬಡಿದು ರೈತ ಸಾವನಪ್ಪಿದ್ದಾರೆ.
ಹೌದು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ರೈತ ನಬಿಲಾಲ್ ಚೌದರಿ ಇದೀಗ ಸಾವನ್ನಪ್ಪಿದ್ದಾರೆ. ಅಫ್ಜಲ್ ಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಈ ಒಂದು ದುರ್ಘಟನೆ ನಡೆದಿದೆ. ರಾಜ್ಯದಲ್ಲಿ ಇದುವರೆಗೂ ಮಹಾಮಳೆಗೆ ಬಲಿಯಾದವರ ಸಂಖ್ಯೆ ಇದೀಗ 6ಕ್ಕೆ ಏರಿಕೆಯಾಗಿದೆ.