ದಾವಣಗೆರೆ : ರಾಜ್ಯದಲ್ಲಿ ಆನ್ಲೈನ್ ಗೇಮ್ ಗೆ ಇದೀಗ ಮತ್ತೊಂದು ಜೀವ ಬಲಿಯಾಗಿದ್ದು, ದಾವಣಗೆರೆಯಲ್ಲಿ ಆನ್ಲೈನ್
ಗೇಮ್ ಗೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ದಾವಣಗೆರೆಯ ಸರಸ್ವತಿ ನಗರದ ಶಶಿಕುಮಾರ್ (25) ನೇಣಿಗೆ ಶರಣಾದ ಯುವಕ ಎಂದು ತಿಳಿದುಬಂದಿದೆ.
ಆನ್ಲೈನ್ ಗೇಮ್ ನಲ್ಲಿ ಶಶಿಕುಮಾರ್ 18 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದ. CROWN-246 ಆನ್ ಲೈನ್ ಗೇಮ್ ನಲ್ಲಿ 18 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದ. ಆನ್ಲೈನ್ ಗೇಮ್ ನಿಷೇಧ ಮಾಡುವಂತೆ ಶಶಿಕುಮಾರ್ ಮನವಿ ಮಾಡಿದ್ದ. ಪಿಎಂ, ಸಿಎಂ, ಡಿಸಿ ಹಾಗು ಎಸ್ ಪಿ ಗೆ ಶಶಿಕುಮಾರ್ ಮನವಿ ಮಾಡಿದ್ದ.
ಸೆಲ್ಫಿ ವಿಡಿಯೋ ಮಾಡಿ ಶಶಿಕುಮಾರ್ ತನ್ನ ನೋವು ಹೇಳಿಕೊಂಡಿದ್ದ. ನನ್ನಂತೆ ಹಣ ಕಳೆದುಕೊಂಡು ನೋವು ಅನುಭವಿಸುವವರು ಕಡಿಮೆಯಾಗಲಿ ಸೆಲ್ಫಿ ವಿಡಿಯೋ ಮಾಡಿ ಶಶಿಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.