ಚಿಕ್ಕಬಳ್ಳಾಪುರ : ಇತ್ತೀಚಿಗೆ ದಾವಣಗೆರೆಯಲ್ಲಿ ಆನ್ಲೈನ್ ಗೇಮ್ ನಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದ ಘಟನೆ ನಡೆದಿತ್ತು. ಇದೀಗ ಆನ್ಲೈನ್ ಜೂಜಾಟಕ್ಕೆ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಹೌದು ಲಕ್ಷಾಂತರ ರೂಪಾಯಿ ಸಾಲ ತೀರಿಸಲಾಗದೆ ಹೆಡ್ ಕಾನ್ಸ್ಟೇಬಲ್ ರಾಜಶೇಖರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಬಳ್ಳಾಪುರದ ಪೊಲೀಸ್ ಕ್ವಾಟರ್ಸ್ ನಲ್ಲಿ ಮಂಚೇನಹಳ್ಳಿ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಜಶೇಖರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೂಜಾಟ ಆಡುವ ಮೂಲಕ ರಾಜಶೇಖರ್ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಈ ಕುರಿತು ತಂದೆ ತಾಯಿಯ ಬಳಿಗೂ ಕಷ್ಟ ಹೇಳಿದ್ದರು.
ಈ ವೇಳೆ ಮಗನಿಗೆ ಕಷ್ಟ ಎಂದು ತಂದೆ ತಾಯಿಯರು ಕೂಡ ತಮ್ಮ ಕೈಲಾದಷ್ಟು ಹಣ ರಾಜಶೇಖರ್ ಗೆ ನೀಡಿದ್ದಾರೆ. ಆದರೂ ಕೂಡ ಸಾಲ ತೀರಿಸಲಾಗಿಲ್ಲ. ಅಲ್ಲದೇ ಸಾಲ ತೀರಿಸುವುದಕ್ಕೆ ಪತ್ನಿಯ ಚಿನ್ನಾಭರಣವನ್ನು ಕೂಡ ರಾಜಶೇಖರ್ ಅಡವಿಟ್ಟಿದ್ದರು ಎನ್ನಲಾಗಿದೆ. ಸದ್ಯ ಘಟನೆ ಸಂಬಂಧ ಚಿಕ್ಕಬಳ್ಳಾಪುರ ಎಸ್ ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.