ಬೆಂಗಳೂರು : IPL ಆರಂಭ ಅದಾಗಿನಿಂದಲೂ ಬೆಟ್ಟಿಂಗ್ ದಂಧೆ ಜೋರಾಗಿರುತ್ತೆ. ಈ ಒಂದು ಬೆಟ್ಟಿಂಗ್ ಗೆ ಎಷ್ಟೋ ಜನ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅಲ್ಲದೇ ಅದೆಷ್ಟೋ ಜನ ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ. ಇದೀಗ ಬೆಳಗಾವಿಯಲ್ಲೂ ಅಂತದ್ದೆ ಘಟನೆ ನಡೆದಿದ್ದು, ಆನ್ಲೈನ್ ಬೆಟ್ಟಿಂಗ್ ಗೆ ಸಿಕ್ಕಾಪಟ್ಟೆ ಸಾಲ ಮಾಡಿದ್ದ ಯುವಕ ಸಾಲಗಾರರ ಕಿರುಕುಳ ತಾಳದೆ ನೇಣಿಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಹೌದು ಆನ್‌ಲೈನ್ ಬೆಟ್ಟಿಂಗ್ ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಅನಿಲ್ ರಾಮು ಜಾಧವ್ (34) ಮೃತ ದುರ್ದೈವಿ ಎಂದು ತಿಳಿದುಬಂದಿದ್ದು, ರಾಮು ಹಲವು ದಿನಗಳಿಂದ ಆನ್‌ಲೈನ್ ಬೆಟಿಂಗ್ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ.
ಬೆಟ್ಟಿಂಗ್ ಗಾಗಿ ರಾಮು ಸಾಕಷ್ಟು ಹಣ ಸುರಿದು ಎಲ್ಲಾ ಕಡೆಗೂ ಸಾಲವನ್ನೂ ಮಾಡಿಕೊಂಡಿದ್ದ. ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಗೆ ಸಾಲಗಾರರ ಕಿರುಕುಳ ಹೆಚ್ಚಾಗಿತ್ತು. ಸಾಲ ತೀರಿಸುವ ದಾರಿ ಕಾಣದೇ ಅನಿಲ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.