ಚಾಮರಾಜನಗರ : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಚಾಮರಾಜನಗರದಲ್ಲಿ ಹೃದಯಾಘಾತಕ್ಕೆ 4 ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದಲ್ಲಿ ಹೃದಯಾಘಾತದಿಂದ 4ನೇ ತರಗತಿ ವಿದ್ಯಾರ್ಥಿ ಉಲ್ಲಾಸ್ ಬಲಿಯಾಗಿದ್ದಾನೆ.
ಕುಲಗಾಣ ಗ್ರಾಮದ ಮೂರ್ತಿ, ಮಹೇಶ್ವರಿ ದಂಪತಿಯ ಪುತ್ರ ಉಲ್ಲಾಸ್ ಬೇಗೂರಿನ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ. ಆರೋಗ್ಯವಾಗಿಯೇ ಇದ್ದ ಬಾಲಕ ಉಲ್ಲಾಸ್ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.