ರಾಮನಗರ : ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ 10 ಲಕ್ಷ ತೆಗೆದುಕೊಂಡ ಸಾಲಕ್ಕೆ 65 ಲಕ್ಷ ಬಡ್ಡಿ ಕಟ್ಟಿದರು ಕೂಡ ಸಾಲ ಕೊಟ್ಟ ವ್ಯಕ್ತಿ ಕಿರುಕುಳ ನೀಡಿದ್ದರಿಂದ ವ್ಯಕ್ತಿ ಒಬ್ಬ ಲಾರಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಇದೀಗ ಮತ್ತೊಂದು ಘಟನೆ ನಡೆದಿದ್ದು ಫೈನಾನ್ಸಿನಲ್ಲಿ ಸಾಲ ಪಡೆದಿದ್ದ ಮಹಿಳೆಯೊಬ್ಬರು ಸಾಲಗಾರರ ಕಿರುಕುಳ ತಾಳಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ತಾಲೂಕಿನ ತಿಮ್ಮಯ್ಯನದೊಡ್ಡಿಯಲ್ಲಿ ನಡೆದಿದೆ.
ಹೌದು ಸಾಲಗಾರರ ಕಾಟಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬರುತ್ತಿದ್ದು, ರಾಮನಗರದ ಯಶೋಧಮ್ಮ (60) ಎನ್ನುವ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಯಶೋಧಮ್ಮ 5 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದರು. ಸುಮಾರು 8ಕ್ಕೂ ಹೆಚ್ಚು ಫೈನಾನ್ಸ್ ಕಂಪನಿಗಳಲ್ಲಿ ಯಶೋಧಮ್ಮ ಸಾಲ ಪಡೆದಿದ್ದರು.
ಆದರೆ ಸಾಲ ಮರುಪಾವತಿಸಿದ ಹಿನ್ನೆಲೆಯಲ್ಲಿ ಫೈನಾನ್ಸ್ ನವರು ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದರು.ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇದೀಗ ಆರೋಪ ಕೇಳಿ ಬಂದಿದೆ. ಮೃತರ ಕುಟುಂಬಸ್ಥರಿಂದ ಫೈನಾನ್ಸ್ ಕಂಪನಿಗಳ ವಿರುದ್ಧ ಈ ಒಂದು ಆರೋಪ ಕೇಳಿ ಬರುತ್ತಿದೆ.ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.