ಬೆಂಗಳೂರು : ಬೆಂಗಳೂರಲ್ಲಿ ಬಿಎಂಟಿಸಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾಗಿದೆ. ಮಡಿವಾಳದ ಬಸ್ ನಿಲ್ದಾಣದ ಬಳಿ ಈ ಒಂದು ಅಪಘಾತ ಸಂಭವಿಸಿದೆ.
ಹೌದು ಇಂದು ಬೆಳಿಗ್ಗೆ ಮಡಿವಾಳದ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಹರಿದು 65 ವರ್ಷದ ವೆಂಕಟರಾಮಪ್ಪಸಾವನಪ್ಪಿದ್ದಾರೆ. ಮೃತ ವೃದ್ಧ ಮಡಿವಾಳ ಮೂಲದನಿವಾಸಿ ಎಂದು ತಿಳಿದುಬಂದಿದೆ. ಘಟನ ಸ್ಥಳಕ್ಕೆ ಮಡಿವಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








