ಮೈಸೂರು : ಮುಡಾ ಹಗರಣಕ್ಕೆ ಇದೀಗ ಮತ್ತೊಂದು ಸ್ಪೋಟಕ ತಿರುವು ಸಿಕ್ಕಿದ್ದು, ಮುಡಾದ ಅಧಿಕಾರಿಗಳೇ ಭೂಗಳ್ಳರ ಜೊತೆ ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ.ಸೈಟ್ ಕ್ರಯ ಆಗುವ ಮುನ್ನವೇ ಸದಸ್ಯರಿಂದ ಸೇಲ್ ಅಗ್ರಿಮೆಂಟ್ ಆಗಿದೆ. ತನ್ನ ಹೆಸರಿಗೆ ಭೂಮಿ ಬರುವ ಒಂದು ತಿಂಗಳ ಮುನ್ನ ಸೆಲ್ ಅಗ್ರಿಮೆಂಟ್ ಆಗಿದೆ ಎಂದು ತಿಳಿದುಬಂದಿದೆ. ಚಾಮುಂಡಿ ನಗರದ ಸರ್ವೋದಯ ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲಾಗಿದ್ದು, ಸದಸ್ಯರ ಸೈಟ್ ಹಂಚಿಕೆಯಲ್ಲಿ ಬೇನಾಮಿ ವ್ಯಕ್ತಿಗಳ ಕೈವಾಡ ಇರುವುದು ಶಂಕೆ ವ್ಯಕ್ತವಾಗಿದೆ.
48 ನಿವೇಶನಗಳ ಪೈಕಿ ಹಲವು ನಿವೇಶನಗಳ ಅಗ್ರಿಮೆಂಟ್ ಆಗಿದೆ. ಮಂಜುನಾಥ್ ಎನ್ನುವ ವ್ಯಕ್ತಿ ಇದರಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಕಾರ್ತಿಕ ಬಡಾವಣೆ ಮಂಜುನಾಥ್ ನನ್ನು 50:50 ಅನುಪಾತದಲ್ಲಿ ಈಗಾಗಲೇ ಇಡಿ ವಿಚಾರಣೆಗೆ ಒಳಪಡಿಸಿದೆ. ಆದರೆ ಇದೀಗ ಸೈಟ್ ಹಂಚಿಕೆ ಮುನ್ನವೇ ಸೇಲ್ ಕುರಿತು ಮೊದಲೇ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು ಎನ್ನುವ ಸ್ಪೋಟಕ ವಿಷಯ ಬಯಲಾಗಿದೆ.
ಸುನಿಲ್ ಕುಮಾರ್ ಎನ್ನುವವರಿಗೆ 2023 ನವೆಂಬರ್ 29 ರಲ್ಲಿ ಸೈಟ್ ಕ್ರಯ ಮಾಡಿಕೊಡಲಾಗಿತ್ತು. ನಿವೇಶನ ಸಂಖ್ಯೆ 42 ಅನ್ನು ಅಧಿಕಾರಿಗಳು ಮಾಡಿಕೊಟ್ಟಿದ್ದಾರೆ. ಆದರೆ ಅದೇ ಸೈಟ್ ಅಕ್ಟೋಬರ್ 13ರಂದು ನಿವೇಶನದ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ವಿನೋದ್ ಕುಮಾರ್ ಗೆ ಸೂರ್ಯಕುಮಾರಿ ಅಗ್ರಿಮೆಂಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೊಂದು ಪ್ರಕರಣದಲ್ಲಿ ಎ.ಫ್ಯಾನ್ಸಿಸ್ ಅನ್ನೋರಿಗೆ ಮುಡಾ ಸೈಟ್ ಕ್ರಯ ಮಾಡಿಕೊಡಲಾಗಿದ್ದು, ಅವರಿಗೆ 2023 ಡಿಸೆಂಬರ್ 15 ರಲ್ಲಿ ಮುಡಾ ಸೈಟ್ ಕ್ರಯ ಮಾಡಲಾಗುತ್ತದೆ. ನಿವೇಶನ ಸಂಖ್ಯೆ 128ನ್ನು ಮುಡಾ ಅಧಿಕಾರಿಗಳೇ ಕ್ರಯ ಮಾಡಿಕೊಟ್ಟಿದ್ದಾರೆ. ಆದರೆ 2023 ಡಿಸೆಂಬರ್ 1 ರಂದೇ ಅಂದರೆ 15 ದಿನಗಳ ಮುನ್ನವೇ ಸೈಟ್ ಸೆಲ್ ಅಗ್ರಿಮೆಂಟ್ ಆಗಿದೆ ಎನ್ನುವ ಆಘಾತಕಾರಿ ವಿಷಯ ಇದೀಗ ಬಹಿರಂಗವಾಗಿದೆ.