ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಂತಹ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಸ್ಫೋಟಕವಾದ ಅಂಶ ಬಹಿರಂಗವಾಗಿದ್ದು, ಈ ಒಂದು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಇಡಿ ಅಧಿಕಾರಿಗಳು ಮುಡಾದಲ್ಲಿ ಸುಮಾರು 700 ಕೋಟಿ ರೂಪಾಯಿಗೂ ಅಧಿಕ ಅಕ್ರಮ ನಡಿದಿದೆ ಎಂದು ತನಿಖೆಯ ವೇಳೆ ದೃಢವಾಗಿದೆ ಎಂದು ಇಡಿ ತಿಳಿಸಿದೆ.
ಹೌದು ಮುಡಾದ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 700 ಕೋಟಿಗೂ ಅಧಿಕ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. 1095 ಸೈಟ್ ಗಳು ಅಕ್ರಮ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಬೆನಾಮಿ ವ್ಯಕ್ತಿಗಳ ಹೆಸರಿಗೆ ಸೈಟ್ ಹಂಚಿಕೆ ಆಗಿರುವುದು ಇದೀಗ ಪತ್ತೆಯಾಗಿದೆ. ಬೆನಾಮಿ ಹಾಗೂ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಕೂಡ ಸೈಟ್ ಹಂಚಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿಗೂ ಕೂಡ 14 ಸೈಟ್ ಗಳು ಹಂಚಿಕೆಯಾಗಿದ್ದವು.
ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿ 14 ಸೈಟ್ ಇದರಲ್ಲಿ ಪತ್ತೆಯಾಗಿವೆ. ಗಣ್ಯರಿಂದ ಸೈಟ್ ಹಂಚಿಕೆಗೆ ಪ್ರಭಾವ ಬೀರಿರುವುದು ಬೆಳಕಿಗೆ ಬಂದಿದೆ. 1,945ಕ್ಕೂ ಹೆಚ್ಚು ಮುಡಾದ ಹಾಲೋಗ್ರಾಮ್ ಬಾಂಡ್ ಗಳು ನಾಪತ್ತೆಯಾಗಿವೆ. ಅಧಿಕಾರಿಗಳು ಅಕ್ರಮ ಎಸಗಿರುವುದು ಕಂಡುಬಂದಿದೆ. ಇದರ ತನಿಖೆಗೆ ಇಡಿ ಅಧಿಕಾರಿಗಳಿಂದ ಲೋಕಾಯುಕ್ತ ಗೆ ಮನವಿ ಮಾಡಿರುವುದು ವರದಿ ನೀಡಿ ತನಿಖೆ ಮಾಡುವಂತೆ ಲೋಕಾಯುಕ್ತರಿಗೆ ಮನವಿ ಮಾಡಲಾಗಿದೆ.