ಮೈಸೂರು : ಮುಡಾದಲ್ಲಿ ಅಕ್ರಮ ನಿವೇಶನಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಬಿಲ್ಡರ್ ಜಯರಾಮ್ ಅವರ ಮೊಬೈಲ್ ಅನ್ನು ಪರಿಶೀಲಿಸಿದ ED ಅಧಿಕಾರಿಗಳು, ಅವರ ಮೊಬೈಲಿನಿಂದ ಕೊಕೊನಟ್ ಕೋಡ್ ವರ್ಡ್ ನೋಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಹೌದು ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಕೋಟಿ ಕೋಟಿ ಕಳ್ಳ ವ್ಯವಹಾರಕ್ಕೆ ಕೋಕನಟ್ ಎಂದು ಕೋಡ್ ವರ್ಡ್ ಬಳಕೆ ಮಾಡಲಾಗಿತ್ತು. ಬೇನಾಮಿ ಡೀಲ್ ಗೆ ಬಿಲ್ಡರ್ ಜಯರಾಮ್ ಈ ಒಂದು ಕೋಡ್ ವರ್ಡ್ ಇಟ್ಟಿದ್ದ ಎಂದು ಇದೀಗ ಇಡೀ ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ. ED ಅಧಿಕಾರಿಗಳ ವಿಚಾರಣೆಯ ವೇಳೆ ಬಿಲ್ಡರ್ ಜಯರಾಮ್ ಅಸಲಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ.
ಅಧಿಕಾರಿಗಳಿಗೆ, ರಾಜಕಾರಣಿಗಳ ಜೊತೆಗೆ ಕೋಕನಟ್ ಸಂದೇಶದ ಮೂಲಕ ಬಿಲ್ಡರ್ ಜಯರಾಮ್ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದ. 1 ಕೋಕನಟ್ ಅಂದರೆ 1 ಲಕ್ಷ, 50 ಕೋಕನಟ್ ಅಂದ್ರೆ 50 ಲಕ್ಷ ಎಂದು ಜಯರಾಮ್ ಕೊಕೊನಟ್ ಕೋಡ್ ವರ್ಡ್ ಮೂಲಕ ಹಣ ಕಳುಹಿಸಿದ್ದ ಎನ್ನಲಾಗಿದೆ.ಈ ಸದ್ಯ ED ಅಧಿಕಾರಿಗಳು ಬಿಲ್ಡರ್ ಜಯರಾಂನಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.