ಬೆಂಗಳೂರು : ಧರ್ಮಸ್ಥಳ ಪ್ರಕರಣ ಇದೀಗ ದಿನದಿಂದ ದಿನಕ್ಕೆbಸ್ಪೋಟಕ ತಿರುವು ಪಡೆದುಕೊಳ್ಳುತ್ತಿದೆ. ಟೀ. ಜಯಂತ್ ನನ್ನು ವಶಕ್ಕೆ ಪಡೆದ ಎಸ್ಐಟಿ ಅಧಿಕಾರಿಗಳು ವಿಚಾರಣೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಬುರುಡೆ ಕೊಟ್ಟಿದ್ದು ಅಂತ ಸ್ಪೋಟಕ ಹೇಳಿಕೆ ನೀಡಿದ್ದಾನೆ.
ಇದರ ಬೆನ್ನಲ್ಲೆ ಎಸ್ಐಟಿ ತನಿಖೆಯಲ್ಲಿ ಮತ್ತೊಂದು ಸ್ಪೋಟಕವಾದ ಅಂಶ ಬೆಳಕಿಗೆ ಬಂದಿದ್ದು ಈ ಒಂದು ಬುರುಡೆ ಗ್ಯಾಂಗ್ ಕೇರಳಕ್ಕೆ ತೆರಳಿ ಅಲ್ಲಿನ ಕಮ್ಯುನಿಸ್ಟ್ ಪಾರ್ಟಿಯ ಸಂಸದ ಸಂತೋಷ್ ಕುಮಾರ್ ಅವರನ್ನು ಭೇಟಿ ಮಾಡಿತ್ತು ಎಂದು ಎಸ್ ಐ ಟಿ ತನಿಖೆಯಲ್ಲಿ ಈ ಕುರಿತು ಸ್ಪೋಟಕ ಮಾಹಿತಿ ಬಯಲಾಗಿದೆ. ಸಂಸದ ಸಂತೋಷ ಕುಮಾರ್ ಎದುರಲ್ಲಿ ಗ್ಯಾಂಗ್ ಬುರುಡೆ ಇಟ್ಟಿತ್ತು. ಕಮ್ಯುನಿಸ್ಟ್ ಪಾರ್ಟಿಯ ಸಂಸದ ಸಂತೋಷ್ ಕುಮಾರ್ ಭೇಟಿ ಮಾಡಿ ಬುರುಡೆ ಇಟ್ಟಿತ್ತು ಎಂದು ತಿಳಿದು ಬಂದಿದೆ.