ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅಪರಿಚಿತ ಶವಗಳ ಭೌತಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅನಾಮಿಕ ವ್ಯಕ್ತಿ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ನೆಲ ಆಗಿದವು ಅಸ್ತಿಪಂಜರ ಹುಡುಕಾಟದಲ್ಲಿ ತೊಡಗಿದೆ ಈಗಾಗಲೇ ಪಾಯಿಂಟ್ ನಂಬರ್ ಆರಲ್ಲಿ ಮನುಷ್ಯನ ದೇಹದ ಹಲವು ಮೂಳೆಗಳು ಸಿಕ್ಕಿದ್ದು ಸ್ಥಿತಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಇದೀಗ ದೂರುದಾರ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದು, ನಾನು ಹರಿಹರಿಯದ ಹುಡುಗಿಯ ಮೃತ ದೇಹವನ್ನು ನೋಡಿದ್ದೆ. ವಯಸ್ಸು 12 ರಿಂದ 15 ವರ್ಷಗಳ ನಡುವೆ ಇತ್ತು ಆ ಬಾಲಕಿ ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು. ಅವಳ ಲಂಗ ಮತ್ತು ಒಳಉಡುಪು ಇರಲಿಲ್ಲ. ಲೈಂಗಿಕ ಆಕ್ರಮಣದ ಸ್ಪಷ್ಟ ಲಕ್ಷಣ ಕಾಣಿಸುತ್ತಿತ್ತು. ಅವಳ ಕುತ್ತಿಗೆ ಹಿಸುಕಿರುವ ಗುರುತುಗಳು ಸಹ ಇದ್ದವು. ನನಗೆ ಗುಂಡಿ ಅಗೆಯಲು ನಿರ್ದೇಶನ ನೀಡಿದ್ದರು. ಅವಳ ಶಾಲಾ ಬ್ಯಾಗ್ ನೊಂದಿಗೆ ಹೂಳಲು ನನಗೆ ಹೇಳಿದ್ದರು.ಆ ಸನ್ನಿವೇಶ ನನಗೆ ಇಂದಿಗೂ ಮಾಸಿಲ್ಲ ಎಂದು ದೂರುದಾರ ಹೇಳಿಕೆ ನೀಡಿದ್ದಾನೆ.
ಇದೀಗ ದೂರುದಾರನ ಹೇಳಿಕೆ ಬಳಿಕ ರಹಸ್ಯ ಬೇಧಿಸೋ ಪ್ರಕ್ರಿಯೆಗೆ ಇಳಿದ ಎಸ್ಐಟಿ ತಂಡ ಶಾಲಾ ಬಾಲಕಿ ನಾಪತ್ತೆ ಬಗ್ಗೆ ಎಸ್ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಕಲ್ಲೇರಿ ಧರ್ಮಸ್ಥಳ ಸುತ್ತಮುತ್ತ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ. 2010ರಲ್ಲಿ ಶಾಲಾ ಬಾಲಕಿ ನಾಪತ್ತೆ ಆಗಿದ್ದಾಳೆ. ಧರ್ಮಸ್ಥಳ ಬೆಳ್ತಂಗಡಿ ಭಾಗದ ಶಾಲೆಗಳಲ್ಲಿ ಬಾಲಕಿ ನಾಪತ್ತೆ ಕುರಿತು ಮಾಹಿತಿಯನ್ನು ಸದ್ಯ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಈ ಭಾಗದ ಠಾಣೆಗಳಲ್ಲಿ ಬಾಲಕಿ ನಾಪತ್ತೆಯಾಗಿರುವ ಪ್ರಕರಣ ಏನಾದರೂ ದಾಖಲೆಯಾಗಿದ್ದ ಎನ್ನುವುದರ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹೆಲ್ಪ್ ಲೈನ್ ಗೆ ಬರ್ತಿವೆ ನೂರಾರು ಕರೆಗಳು!
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ದೂರು ನೀಡಲು ಎಸ್ಐಟಿ ಕಳೆದ ಎರಡು ದಿನಗಳ ಹಿಂದೆ ಸಹಾಯವಾಣಿ ಆರಂಭಿಸಿತ್ತು. ಎಸ್ ಐ ಟಿ ತೆರೆದಿರುವ ಸಹಾಯವಣಿಗೆ ಇದೀಗ ನೂರಾರು ಕರೆಗಳು ಬರುತ್ತಿವೆ. ರಾಜ್ಯ ಅಷ್ಟೆ ಅಲ್ಲದೇ ಹೊರ ರಾಜ್ಯಗಳಿಂದ ನೂರಾರು ಕರೆಗಳು ಬರುತ್ತಿವೆ. ಆದರೆ ತನಿಖೆಯ ವಿವರ ಕೇಳುವುದಕ್ಕೆ ಈ ಒಂದು ಕರೆಗಳು ಬರುತ್ತಿರವೆ ಎಂದು ತಿಳಿದು ಬಂದಿದೆ. ಕೇಸ್ ಪ್ರಗತಿಯ ಬಗ್ಗೆ ಬಹುತೇಕರು ಮಾಹಿತಿ ಕೇಳುತ್ತಿದ್ದಾರೆ. ಕರೆ ಮಾಡಿ ಕೆಲವರು ಸಲಹೆಯನ್ನು ಕೂಡ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದುವರೆಗೂ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂದು ಈ ಬಗ್ಗೆ ಎಸ್ಐಟಿ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.