ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಗಲಾಟೆ ನಡೆದು ಓರ್ವ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾಗಿರುವ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರಾಜಶೇಖರ್ ಗೆ ಗುಂಡೆಟು ತಗುಲಿದ್ದು, ಶಾಸಕ ಜನಾರ್ಧನ ರೆಡ್ಡಿ ಅವರು ಈ ಒಂದು ವಿಡಿಯೋ ವೈರಲ್ ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗೆ ತಗುಲಿದ ಗುಂಡೇಟಿನ ವಿಡಿಯೋ ಇದೀಗ ವೈರಲ್ ಆಗಿದೆ. ರಸ್ತೆಯಲ್ಲಿರುವ ಡಿವೈಡರ್ ಮರ ನಿಂತು ರಾಜಶೇಖರ್ ಶಾಸಕ ಜನಾರ್ಧನ್ ರೆಡ್ಡಿ ಮನೆಯ ಮೇಲೆ ಕಲ್ಲು ಎಸೆಡಿದ್ದಾನೆ. ಈ ವೇಳೆ ಪೊಲೀಸರು ರಾಜಶೇಖರ್ ಗೆ ಲಾಠಿ ಏಟು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ರಾಜಶೇಖರ್ ಓಡುತ್ತಿರುವಾಗ ಸತೀಶ್ ರೆಡ್ಡಿ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದು ಆ ಗುಂಡು ರಾಜಶೇಖರಿಗೆ ತಗುಲಿರುವ ವಿಡಿಯೋವನ್ನು ಶಾಸಕ ಜನಾರ್ಧನ ರೆಡ್ಡಿ ಇದೀಗ ರಿಲೀಸ್ ಮಾಡಿದ್ದಾರೆ.
ಜನಾರ್ದನ ರೆಡ್ಡಿ ಕಡೆಯವರಿಂದಲೂ ಫೈರಿಂಗ್ ಆಗಿದೆ ಎನ್ನುವ ಆರೋಪಕ್ಕೆ ಶಾಸಕ ಜನಾರ್ದನ ರೆಡ್ಡಿ ಸ್ಪಷ್ಟನೆ ನೀಡಿದ್ದು, ಜನಾರ್ದನ ರೆಡ್ಡಿ ಮನೆಯ ಮೇಲೆ ಗನ್ ಮ್ಯಾನ್ ಇದ್ದಾರೆ ಎಂದು ಹೇಳಿದ್ದಾರೆ. ಈ ಘಟನೆಯನ್ನು ನನ್ನ ತಲೆಗೆ ಕಟ್ಟಲು ಯತ್ನಿಸಿದ್ದಾರೆ. ಉದ್ದೇಶಪೂರ್ವಕವಾಗಿ ಮಾಡಿರುವ ಕೊಲೆ ಇದು ಎಂದು ಶಾಸಕ ಜನಾರ್ದನ ರೆಡ್ಡಿ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟಪಡಿಸಿದ್ದಾರೆ.








