ಬೆಂಗಳೂರು : ಕನ್ನಡ ಬಿಗ್ ಬಾಸ್ ಆರಂಭವಾದಾಗಿನಿಂದಲೂ ಹಲವಾರು ಸಂಕಷ್ಟ ಎದುರಾಗಿತ್ತು. ಇದೀಗ ಬಿಗ್ ಬಾಸ್ ಕನ್ನಡ ಶೋಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ರಣಹದ್ದುಗಳ ಬಗ್ಗೆ ಕಿಚ್ಚ ಸುದೀಪ್ ಅಕ್ಷೇಪರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಡಿ ಎಫ್ ಓ ರಾಮಕೃಷ್ಣಪ್ಪ ಗೆ ದೂರು ನೀಡಲಾಗಿದೆ.
ಹೌದು ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ಕಾರ್ಯಕ್ರಮದ ವೀಳೆ ರಣಹದ್ದುಗಳ ಬಗ್ಗೆ ಕಿಚ್ಚ ಸುದೀಪ್ ಆಕ್ಷೇಪ ಅರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಡಿ ಎಫ್ ಓ ರಾಮಕೃಷ್ಣಪ್ಪ ಅವರಿಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದೆ.
ಹೊಂಚು ಹಾಕಿ ಸಂಚು ಮಾಡಿ ಹಿಡಿಯುವುದು ಎಂಬ ಪದ ಬಳಕೆ ಮಾಡಿದ್ದಾರೆ. ರಣಹದ್ದು ಕುರಿತು ಬಿಗ್ ಬಾಸ್ ಶೋನಲ್ಲಿ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಹಾಗಾಗಿ ಸರಿಯಾದ ಮಾಹಿತಿಯನ್ನು ವೀಕ್ಷಕರಿಗೆ ತಿಳಿಸುವಂತೆ ಆಗ್ರಹಿಸಿದ್ದಾರೆ.








