ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿಗೆ ನಟ ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ಧತಿ ಮಾಡುವಂತೆ ಮೇಲ್ಮನವಿ ಸಲ್ಲಿಸಿತ್ತು. ರಾಜ್ಯ ಸರ್ಕಾರ ನಟ ದರ್ಶನ್ ಅವರಿಗೆ ಜಾಮೀನು ರದ್ದತಿ ಮಾಡುವಂತೆ 7 ಪ್ರಮುಖ ಕಾರಣಗಳನ್ನು ನೀಡಿದೆ.
ಹೌದು ಜಾಮೀನು ರದ್ದತಿಗೆ ರಾಜ್ಯ ಸರ್ಕಾರ 7 ಕಾರಣ ನೀಡಿದೆ. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ಉಲ್ಲೇಖಿಸಿದೆ. ಪವಿತ್ರಗೌಡ, ನಟ ದರ್ಶನ್, ಜಗದೀಶ್, ಅನು ಕುಮಾರ್, ನಾಗರಾಜ್, ಲಕ್ಷ್ಮಣ್ ಹಾಗೂ ಪ್ರದೋಶ್ ಜಾಮೀನು ರದ್ಧತಿಗೆ ಮನವಿ ಸಲ್ಲಿಸಲಾಗಿದೆ.
ರಾಜ್ಯದ ಒಳಗೆ ಮತ್ತು ಹೊರಗೆ ನಟ ದರ್ಶನ್ ಅವರು ಅಭಿಮಾನಿಗಳನ್ನು ಅಪಾರ ಹೊಂದಿದ್ದಾರೆ. ಸೆಲೆಬ್ರಿಟಿ ಆಗಿರುವುದರಿಂದ ಸಾಕ್ಷಿ ತಿರುಚುವ ಸಾಧ್ಯತೆ ಇದೆ. ಹೈಕೋರ್ಟ್ ಇದನ್ನು ಪರಿಗಣಿಸಿಲ್ಲ ಆರೋಪ ಪಟ್ಟಿಯಲ್ಲಿ 262 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ವಿಚಾರಣೆ ವಿಳಂಬ ಆಗಿದ್ದಕ್ಕೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಹೈಕೋರ್ಟ್ ನ ಈ ಅಭಿಪ್ರಾಯವೂ ಕೂಡ ಅವಸರದಿಂದ ಕೂಡಿದೆ.
ರೇಣುಕಾ ಸ್ವಾಮಿಯನ್ನು ಬಲವಂತವಾಗಿ ಕರೆ ತಂದಿದ್ದಾರೆ. ಐಪಿಸಿ ಸೆಕ್ಷನ್ 364 ಪರಿಗಣಿಸಿಲ್ಲ. ಲಭ್ಯ ಸಾಕ್ಷಿಯ ದಾಖಲೆ ಪರಿಗಣಿಸದೆ ಜಾಮೀನು ಮಂಜೂರು ಮಾಡಲಾಗಿದೆ. ಸತ್ರ ನ್ಯಾಯಾಲಯದಲ್ಲಿ ಪ್ರಕರಣ ಆರೋಪ ನಿಗದಿಯ ಹಂತಕ್ಕೆ ಬಂದಿಲ್ಲ. ಹೀಗೆ ಒಟ್ಟು 7 ಕಾರಣ ನೀಡಿ ಸರ್ಕಾರದಿಂದ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.