ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ಗೆ ರಾಜಾತಿಥ್ಯ ವಿಚಾರವಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮಾತನಾಡಿ ಈ ಕುರಿತಂತೆ ಅಧಿಕಾರಿಗಳು ಜೈಲಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ವರದಿ ಬಂದ ನಂತರ ದರ್ಶನ್ ವಿರುದ್ಧ ಮತ್ತೊಂದು ಕೇಸ್ ದಾಖಲಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾರ ಒತ್ತಡಕ್ಕೂ ಕೂಡ ಮರೆಯುವುದಿಲ್ಲ. ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ ಸ್ವಲ್ಪ ಸಿಟ್ಟು ಮಾಡಿಕೊಂಡಂತೆ ಕಂಡುಬಂದ ಅವರು, ನಾನು ಕೋಪ ಮಾಡಿಕೊಳ್ಳುತ್ತಿಲ್ಲ ದಯವಿಟ್ಟು ಹೇಳುವುದನ್ನು ಕೇಳಿ ಎಂದು ಅವರು ತಿಳಿಸಿದರು.
ನಂತರ ಮುಂದುವರೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಸಹ ಅನುಮಾನ ಪಡುವುದು ಬೇಕಿಲ್ಲ. ಕಾನೂನು ಪ್ರಕಾರ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ದರ್ಶನ್ ವಿರುದ್ಧ ಪ್ರತ್ಯೇಕ ಕೇಸ್ ದಾಖಲಿಸಬೇಕಾ ನೋಡುತ್ತೇನೆ. ಆತಿಥ್ಯ ಸಿಗದ ಕಡೆ ದರ್ಶನ್ ಶಿಫ್ಟ್ ಮಾಡಬೇಕಾ ನೋಡೋಣ ಎಂದು ಬೆಂಗಳೂರಿನಲ್ಲಿ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದರು.