ನವದೆಹಲಿ : ದೇಶದಲ್ಲಿ ಮತ್ತೊಂದು ರೈಲು ಅಪಘಾತ ಸಂಭವಿಸಿದ್ದು, ಬಿಹಾರದ ಬಕ್ಸರ್ ಜಿಲ್ಲೆಯ ಡುಮ್ರಾನ್ ಮತ್ತು ರಘುನಾಥಪುರ ನಿಲ್ದಾಣಗಳ ಬಳಿಯ ಧರೌಲಿಯಲ್ಲಿ ಮಗಧ್ ಎಕ್ಸ್‌ಪ್ರೆಸ್ ರೈಲು ಅಪಘಾತವಾಗಿದೆ. ಇದರಿಂದ ರೈಲು ಎರಡು ಭಾಗಗಳಾಗಿ ಪ್ರಯಾಣಿಕರು ಪರದಾಡಿದರು.
ಮಗಧ್ ಎಕ್ಸ್‌ಪ್ರೆಸ್ ನವದೆಹಲಿಯಿಂದ ಪಾಟ್ನಾಗೆ ಹೋಗುತ್ತಿತ್ತು. ರೈಲು ಸಂಖ್ಯೆ 20802 ಡುಮ್ರಾನ್ ರೈಲು ನಿಲ್ದಾಣದಿಂದ 8 ನಿಮಿಷಗಳ ವಿಳಂಬದೊಂದಿಗೆ 11:00 ಗಂಟೆಗೆ ಹೊರಟಿತು. 11.06 ಕ್ಕೆ ಈ ರೈಲು ತುದಿಗಂಜ್ ನಿಲ್ದಾಣದಿಂದ ಹೊರಟಿತು. ಸುಮಾರು ಒಂದು ನಿಮಿಷದ ನಂತರ ಈ ಅಪಘಾತ ಸಂಭವಿಸಿದೆ. ಆದರೆ, ರೈಲು ಹಳಿ ತಪ್ಪಲು ಕಾರಣವೇನೆಂಬುದನ್ನು ಇನ್ನಷ್ಟೇ ಪರಿಶೀಲಿಸಬೇಕಿದೆ.
I an travelling to New Delhi to Patna Jn From Magadh Express 20802 After Buxer Station train has been break from middle @RailMinIndia @RailwaySeva @OfficeOfKNath @jitupatwari @INCIndia @aajtak @anjanaomkashyap @NakulKNath @ABPNews @narendramodi @AmitShah @AshwiniVaishnaw pic.twitter.com/mUwUhZsrD3
— Aryaman vishwakarma (@Aryamanvishwak2) September 8, 2024