ಬೆಂಗಳೂರು : ಸಮಾಜ ನಮ್ಮ ಪ್ರೀತಿ ಒಪ್ಪಲ್ಲ ಎಂದು ನಿನ್ನೆ ಪ್ರಿಯಕರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಇದರಿಂದ ಮನನೊಂದ ವಿವಾಹಿತೆ ಪ್ರಿಯತಮೆ ಒಬ್ಬಳು ಇಂದು ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಅಮೃತ ಹಳ್ಳಿಯಲ್ಲಿ ನಡೆದಿದೆ.
ಹೌದು ಅಮೃತಹಳ್ಳಿಯ ಶ್ರೀರಾಮಪುರದಲ್ಲಿ ಪ್ರಿಯತಮೆ ದಿಲ್ಶಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿನ್ನೆ ಆಕೆಯ ಪ್ರಿಯಕರ ಜಾನ್ಸನ್ (25) ಆತ್ಮಹತ್ಯೆ ಮಾಡಿಕೊಂಡಿದ್ದು ಇಂದು ದಿಲ್ಶಾದ್ (23) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಿಲ್ಶಾದ್ ಈಗಾಗಲೇ ಮದುವೆಯಾಗಿತ್ತು. ಜಾನ್ಸನ್ಗೆ ಮದುವೆಯಾಗಿರಲಿಲ್ಲ. ಆದರೂ ಕೂಡ ಪರಸ್ಪರವಾಗಿ ಜಾನ್ಸನ್ ಹಾಗೂ ದಿಲ್ಶಾದ್ ಪ್ರೀತಿಸುತ್ತಿದ್ದರು.
ಸಮಾಜ ನಮ್ಮ ಪ್ರೀತಿ ಒಪ್ಪಲ್ಲ ಎಂದು ನಿನ್ನೆ ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿದ್ದ. ರಾಜೇನಹಳ್ಳಿಯಲ್ಲಿ ನಿನ್ನೆ ಪ್ರಿಯಕರ ಜಾನ್ಸನ್ ನೇಣಿಗೆ ಶರಣಾಗಿದ್ದ. ಜಾನ್ಸನ್ ಸಾವಿನ ವಿಚಾರ ತಿಳಿದು ಇಂದು ದಿಲ್ಶಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.