ಹಾಸನ : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದುಷ್ಕರ್ಮಿ ಒಬ್ಬ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಘಟನೆ ನಡೆದಿತ್ತು. ಅದಾದ ಬಳಿಕ ಮೈಸೂರಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಕೂಡ ಹಸುಗಳ ಬೆಲೆ ಹಲ್ಲೆ ನಡೆದಿತ್ತು. ಇದೀಗ ಹಾಸನದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ಚರಂಡಿಯಲ್ಲಿ ಕಿಡಿಗೇಡಿಗಳು ಹಾವುಗಳ ಚರ್ಮ ಸುಲಿದು ಬಿಸಾಡಿರುವ ಘಟನೆ ವರದಿಯಾಗಿದೆ.
ಹೌದು ಹಾಸನ ಜಿಲ್ಲೆಯ ಹೊಳೆನರಸೀಪುರದ ದರ್ಜಿ ಬೀದಿಯಲ್ಲಿ ಒಂದು ಘಟನೆ ನಡೆದಿದೆ. ಚರಂಡಿಯಲ್ಲಿ ಹಾವುಗಳ ಚರ್ಮ ಮತ್ತು ಅವಶೇಷಗಳು ಪತ್ತೆಯಾಗಿವೆ. ಹಾವುಗಳ ಚರ್ಮ ಸುಲಿದು ಕಿಡಿಗಿಡಿಗಳು ಮಾಂಸ ಬೇರ್ಪಡಿಸಿದ್ದಾರೆ. ಚರಂಡಿಯಲ್ಲಿ ಹಾವುಗಳ ಚರ್ಮ ಹಾಗೂ ಅವಶೇಷಗಳು ಪತ್ತೆಯಾಗಿವೆ. ಘಟನೆಯಿಂದ ಸಹಜವಾಗಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕಿಡಿಗೇಡಿಗಳು ಹಾವುಗಳ ಮಾಂಸಕ್ಕಾಗಿ ಹಾವಿನ ಚರ್ಮ ಸುಲಿದಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಸ್ಥಳೀಯರಲ್ಲಿ ಈ ಒಂದು ಘಟನೆ ಆತಂಕ ಸೃಷ್ಟಿ ಮಾಡಿದೆ. ಘಟನೆ ಕುರಿತು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.