ಬೆಂಗಳೂರು : ಇತ್ತೀಚಿಗೆ ಜಿಎಸ್‌ಟಿ ಕಡಿತಾದ ಬೆನ್ನೆಲೆ ಕೆಎಂಎಫ್ ನಂದಿನಿ ತುಪ್ಪ ಸೇರಿದಂತೆ ಹಲವು ವಸ್ತುಗಳ ಮೇಲಿನ ದರ ಕಡಿಮೆ ಮಾಡಿತ್ತು. ಇದೀಗ ಗ್ರಾಹಕರಿಗೆ ದರ ಏರಿಕೆ ಶಾಕ್ ನೀಡಿದ್ದು ನಂದಿನಿ ತುಪ್ಪದ ದರ ಪ್ರತಿ ಲೀಟರ್ಗೆ 90 ರೂಪಾಯಿ ಏರಿಕೆಯಾಗಿದೆ. ಹೌದು ಜಿಎಸ್‌ಟಿ ಕಡಿತದ ಬಳಿಕ ಕೆಎಂಎಫ್ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿತು. ಆದರೆ ತುಪ್ಪಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ದಿಢೀರ್ ದರ ಏರಿಕೆ ಮಾಡಿದೆ ಈ ಮೂಲಕ ರಾಜ್ಯದ ಜನತೆಗೆ ಶಾಕ್ ನೀಡಿದೆ. ಒಂದು ಲೀಟರ್ ನಂದಿನಿ ತುಪ್ಪಕ್ಕೆ, ಇದೀಗ ರೂ.700 ನಿಗದಿ ಮಾಡಲಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಕೆ ಸುರೇಶ್ ಮಾತನಾಡಿದ್ದು ತುಪ್ಪ ಹಾಲಿನ ದರ ಸರ್ಕಾರ ಏರಿಕೆ ಮಾಡಿದೆ ಒಟ್ಟು ಸುಮಾರು 95 ಲಕ್ಷಕ್ಕಿಂತ ಒಂದು ಕೋಟಿ ಲೀಟರ್ ಪ್ರತಿದಿನ ಉತ್ಪತ್ತಿಯಾಗುತ್ತದೆ ನಾವು 50 ಲಕ್ಷ ಮಾತ್ರ ಹಾಲು ಮಾರಾಟ ಮಾಡಲಾಗುತ್ತೆ. ಉಳಿದ 50 ಲಕ್ಷ ಲೀಟರ್ಗೆ ರೈತರಿಗೆ ಹಣ ಕೊಡುತ್ತೇವೆ ಅದು ನಮಗೆ ನಷ್ಟ ಆಗುತ್ತಿದೆ. ಇಡೀ ರಾಜ್ಯದಂತ ಬೆಣ್ಣೆ ಶಾರ್ಟೇಜ್ ಇದೆ. ತುಪ್ಪ ಮತ್ತು ಬೆಣ್ಣೆಗೆ ಸಾಕಷ್ಟು ಬೇಡಿಕೆ ಇದ್ದು ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅತ್ಯಂತ ಕಡಿಮೆ ದರ ಇರುವುದು. ನಮ್ಮ ರಾಜ್ಯದ ಬೆಣ್ಣೆ ಮತ್ತು ತುಪ್ಪ ಅತ್ಯಂತ ಕಡಿಮೆ ದರ ಹೊಂದಿದೆ ಎಂದು ತಿಳಿಸಿದರು.








