ಧಾರವಾಡ : ಧಾರವಾಡದಲ್ಲೂ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಯ ಜನಿವಾರ ತೆಗೆಸಿ ಪರೀಕ್ಷೆ ಬರೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡದ ಹುರಕಡ್ಲಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ ನಂದನ್ ಏರಿ ಎಂಬ ವಿದ್ಯಾರ್ಥಿಗೆ ಜನಿವಾರ ತೆಗೆಸಿ ಸಿಇಟಿ ಪರೀಕ್ಷೆ ಬರೆಸಲಾಗಿದೆ.
ಜೆಎಸ್ ಎಸ್ ಕಾಲೇಜು ವಿದ್ಯಾರ್ಥಿಯಾಗಿರುವ ನಂದನ್ ಬ್ಯಾಗಿನೊಳಗೆ ಜನಿವಾರ ಇಟ್ಟುಕೊಳ್ಳುತ್ತೇನೆ ಎಂದು ಕೇಳಿಕೊಂಡರೂ ಬಿಡದೇ ಜನಿವಾರವನ್ನು ಕಟ್ ಮಾಡಿ ಸಿಬ್ಬಂದಿಗಳು ತೆಗೆದಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ.