ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಈ ಮೊದಲು ದರ್ಶನ್ ಗೆ ಈ ರಾಜ್ಯಾತಿಥ್ಯ ನೀಡಿರುವ ವಿಚಾರವಾಗಿ ಭಾರಿ ಸದ್ದು ಆಗಿತ್ತು. ಇದೀಗ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು ಜೈಲಿನಲ್ಲಿ ಉಮೇಶ್ ರೆಡ್ಡಿ ಬಿಂದಾಸ್ ಲೈಫ್ ಸ್ಟೈಲ್ ನಡೆಸುತ್ತಾ ಇದ್ದಾನೆ.
ಹೌದು ಜೈಲಿನಲ್ಲಿ ಅಪರಾಧಿ ಉಮೇಶ್ ರೆಡ್ಡಿ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆಗಿದೆ. ಕೊಲೆ ಆರೋಪಿ ದರ್ಶನ್ ಇರೋ ಜೈಲಲ್ಲಿ ನಲ್ಲಿ ರಾಜಾತಿಥ್ಯ ನೀಡಲಾಗುತ್ತಿದ್ದು, ಪರಪ್ಪನ ಅಗ್ರಹಾರ ಜೇಲಿನಲ್ಲಿ ಉಮೇಶ್ ರೆಡ್ಡಿಗೆ ಫುಲ್ ರಾಜಾತಿಥ್ಯ ನೀಡಲಾಗುತ್ತಿದೆ. ಉಮೇಶ್ ರೆಡ್ಡಿ ಬಿಂದಾಸ್ ಲೈಫ್ ಲೀಡ್ ಮಾಡುತ್ತಿದ್ದಾನೆ. ಅಲ್ಲದೆ ನಟಿ ರನ್ಯಾರಾವ್ ಗೋಲ್ಡ್ ಪ್ರಕರಣದ ಆರೋಪಿ ಬಳಿಯೂ ಮೊಬೈಲ್ ಪತ್ತೆಯಾಗಿದೆ ನ್ಯಾಯಾಂಗ ಬಂದನದಲ್ಲಿರುವ ತರುಣ್ ಕೊಂಡೂರು ಬಿಂದಾಸ್ ಆಗಿ ಮೊಬೈಲ್ ಬಳಕೆ ಮಾಡುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.
ಅಲ್ಲದೆ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಸ್ಫೋಟಕ ದೃಶ್ಯ ವೈರಲ್ ಆಗಿದ್ದವು ಭಯೋತ್ಪಾದಕರ ಕೈಗೂ ಮೊಬೈಲ್ ಫೋನ್ ಸಿಗುತ್ತಿದೆ. ಗೆಲಿನಲ್ಲಿ ಟೆರರಿಸ್ಟ್ ಗಳಿಗೂ ಮೊಬೈಲ್ ಫೋನ್ ಇಡಲಾಗುತ್ತಿದ್ದು ಅವರು ಸಹ ಮೊಬೈಲ್ ನಲ್ಲಿ ಮಾತನಾಡುತ್ತಿರುವ ದೃಶ್ಯ ವೈರಲಾಗಿದೆ.








