ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಇದೀಗ ಜೈಲಿನಲ್ಲಿಯೇ ಕೈದಿಗಳಿಗೆ ಮತ್ತು ಏರಿಸುವ ಮದ್ಯ (ಕಳ್ಳಭಟ್ಟಿ) ತಯಾರಾಗುತ್ತಿದೆ. ಕಳ್ಳಭಟ್ಟಿ ತಯಾರಕರೇ ಕಾರಾಗೃಹದ ಮದ್ಯ ತಯಾರಿಕೆಯ ಲೀಡರ್ ಆಗಿದ್ದಾರೆ. ಕಳ್ಳಭಟ್ಟಿ ಕೇಸ್ನಲ್ಲಿ ಲಾಕ್ ಆದವರೇ ಕಳಭಟ್ಟಿ ತಯಾರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಕಳಬಟ್ಟಿ ಪ್ರಕರಣದಲ್ಲಿ ಯಾರು ಜೈಲಿನಲ್ಲಿ ಇರುತ್ತಾರೋ ಅವರೇ ಕಳಬಟ್ಟಿ ತಯಾರಿಸಿ ಇತರೆ ಕೈದಿಗಳಿಗೆ ನೀಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಲ್ಲಿ ಮದ್ಯದ ಫ್ಯಾಕ್ಟರಿಗೆ ತೆರೆದುಕೊಂಡಿದ್ದು ಈ ಕುರಿತು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೊಸ ವರ್ಷ ಆಚರಣೆ ಹಿನ್ನಲೆಯಲ್ಲಿ ಕಳ್ಳಬಟ್ಟಿ ತಯಾರಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಕೊಳೆತ ದ್ರಾಕ್ಷಿ ಮತ್ತು ಸೇಬು, ರಾಶಿ ರಾಶಿ ಹಣ್ಣುಗಳು ಚಕ್ಕೆ, ಗೋಧಿ ಸಕ್ಕರೆ ಮುಂತಾದ ಪದಾರ್ಥಗಳನ್ನು ಕೈದಿಗಳು ಸಂಗ್ರಹ ಮಾಡಿ ಇಟ್ಟುಕೊಂಡಿದ್ದಾರೆ ಕಳ್ಳಭಟ್ಟಿ ತಯಾರಿಕೆಗೆ ಒಂದೊಂದು ತಂಡ ಪ್ಲಾನ್ ಮಾಡಿದ್ದು, ಒಂದು ತಂಡ ಕೊಳೆತ ಹಣ್ಣು ಸಂಗ್ರಹ ಮಾಡುತ್ತದೆ. ಮತ್ತೊಂದು ತಂಡ ಜೈಲಿನ ಬೇಕರಿಯಿಂದ ಈಸ್ಟ್ ತಂದು ಎಲ್ಲಾ ಐಟಂಗಳು ಮಿಕ್ಸ್ ಮಾಡಿ ಒಂದು ಕಡೆ ಇಡುತ್ತಿದ್ದರು. ಎಲ್ಲಾ ತಯಾರಾದ ಮೇಲೆ ಕಳ್ಳ ಭಟ್ಟಿ ತಯಾರಿಸುತ್ತಿದ್ದರು ಎಂದು ತಿಳಿದುಬಂದಿದೆ.







