ಬಳ್ಳಾರಿ : ಈಗಾಗಲೇ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ಭಾರಿ ಸದ್ದು ಮಾಡಿದ್ದು ಇದರ ಬೆನಲ್ಲೇ ಇದೀಗ ಬಳ್ಳಾರಿ ಪಾಲಿಕೆಯಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಮನೆ ತೆರಿಗೆ ಸಂಗ್ರಹ ಹೆಸರಿನಲ್ಲಿ ಪಾಲಿಕೆಯ ಬಿಲ್ ಕಲೆಕ್ಟರ್ ಗಳು ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ರೂಪಾಯಿ ತೆರಿಗೆ ಹಣ ವಂಚಿಸಿರುವ ಆರೋಪ ಇದೀಗ ಕೇಳಿ ಬಂದಿದೆ.
ಹೌದು ಮನೆ ತೆರಿಗೆ ಹೆಸರಿನಲ್ಲಿ ಒಂದೇ ರಸೀದಿಗೆ ಡಬಲ್ ಬಿಲ್ ಸೃಷ್ಟಿ ಮಾಡಿ ವಂಚನೆ ಎಸಗಲಾಗಿದೆ. ಮನೆತರಿಗೆ ಸಂಗ್ರಹ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಇದೀಗ ನುಂಗಿರುವ ಆರೋಪ ಕೇಳಿ ಬಂದಿದೆ. ಯಾರದ್ದು ಮನೆಯ ತೆರಿಗೆಯ ಬಿಲ್ ನಂಬರ್ ಬಳಸಿ ಅಕ್ರಮ ಎಸಗಿದ್ದು, ಮತ್ತೆ ಇನ್ಯಾರದ್ದು ಮನೆಯ ಅಸಲಿ ಬಿಲ್ ಎಂಬಂತೆ ನಂಬಿಸಿ ವಂಚನೆ ಎಸಗಲಾಗಿದೆ. ಬಿಲ್ ಕಲೆಕ್ಟರ್ ಗಳ ವಿರುದ್ಧ ಲಕ್ಷಾಂತರ ಹಣ ವಂಚಿಸಿರುವ ಆರೋಪ ಕೇಳಿ ಬಂದಿದೆ.
ಮನೆ ತೆರಿಗೆ ಸಂಗ್ರಹದಲ್ಲಿ ಲಕ್ಷಾಂತರ ರೂಪಾಯಿ ಗೋಲ್ಮಾಲ್ ಯಾರದೋ ಮನೆಯ ತೆರಿಗೆ ಇನ್ಯಾರತ್ ಮತ್ತು ಬಿಲ್ ಕಲೆಕ್ಟರ್ ಗಳ ವಿರುದ್ಧ ಲಕ್ಷಾಂತರ ಹಣ ವಂಚಿಸಿರುವ ಆರೋಪ ಕೇಳಿ ಬಂದಿದೆ ನಕಲಿ ಬಿಲ್ ಸೃಷ್ಟಿಸಿಪಾಲಿಕೆ ಅಧಿಕಾರಿ ಸಿಬ್ಬಂದಿ ಕುಮ್ಮಕ್ಕು ನೀಡಿರುವ ಆರೋಪ ಕೇಳಿ ಬಂದಿದೆ. ಅಕ್ರಮದ ಕುರಿತಂತೆ ತನಿಖೆ ನಡೆಸಲು ಲೋಕಾಯುಕ್ತ ಮೊರೆ ಹೋಗಲು ಬಿಜೆಪಿ ನಿರ್ಧರಿಸಿದೆ. ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ವಾರ್ಷಿಕ 40 ಕೋಟಿಗೂ ಹೆಚ್ಚು ಮನೆ ತೆರಿಗೆ ಸಂಗ್ರಹವಾಗಬೇಕು ವರ್ಷದಿಂದ ವರ್ಷಕ್ಕೆ ತೆರಿಗೆ ಹಚ್ಚುವ ಬದಲು ಇಳಿಕೆ ಆಗುತ್ತಿದೆ. ರಶೀದಿ ನಂಬರ್ ಬಳಸಿ ನಕಲಿ ರಶೀದಿ ನೀಡುತ್ತಿರುವುದೇ ಇದಕ್ಕೆ ಕಾರಣವಾಗಿದೆ.