ಬೆಂಗಳೂರು : ರಾಜ್ಯದಲ್ಲಿ ಇದೀಗ ಮತ್ತೊಂದು ದರೋಡೆ ನಡೆದಿದ್ದು, ನಾಲ್ಕು ಬೈಕ್ ನಲ್ಲಿ ಬಂದ ಗ್ಯಾಂಗ್ ಒಂದು ಸೀನಿಮಿಯ ರೀತಿಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ 20 ಲಕ್ಷ ದರೋಡೆ ಮಾಡಿದ್ದಾರೆ. ಬೆಂಗಳೂರಿನ ಯಲಹಂಕದಿಂದ ದೇವನಹಳ್ಳಿಗೆ ತೆರಳುವಾಗ ಈ ಒಂದು ಕೃತ್ಯ ನಡೆದಿದೆ.
ನಾಲ್ಕು ಬೈಕ್ಗಳಲ್ಲಿ ಬಂದಿದ್ದ ಗ್ಯಾಂಗ್ನಿಂದ ದೊಣ್ಣೆಗಳಿಂದ ಹಲ್ಲೆ ನಡೆದಿದೆ. ಆಂಧ್ರಪ್ರದೇಶದ ವಿಶ್ವ ಪ್ರಸಾದ್ ಆತನ ಜೊತೆಗಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. 20 ಲಕ್ಷ ಹಣ ದೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ. ದೇವನಹಳ್ಳಿಯ ವಿಜಯಪುರ ಪೊಲೀಸ್ರಿಂದ ಕಳ್ಳರ ಹುಡುಕಾಟ ನಡೆಯುತ್ತಿದೆ. ದೇವನಹಳ್ಳಿ ತಾಲೂಕಿನ ವೆಂಕಟಗಿರಿ ವೆಂಕಟಗಿರಿ ಕೋಟೆಯ ರಾಷ್ಟ್ರೀಯ ಹೆದ್ದಾರಿ 47ರ ಬಳಿ ಇರುವ ಖಾಸಗಿ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ.







