ಮಂಡ್ಯ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಬೀದರ್, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದರೋಡೆ ಪ್ರಕರಣಗಳು ನಡೆದಿದ್ದವು.ಇದೀಗ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಬ್ಯಾಂಕ್ ದರೋಡೆಗೆ ವಿಫಲ ಯತ್ನ ನಡೆಸಲಾಗಿದೆ.
ಹೌದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ದೇವಲಾಪುರ ಗ್ರಾಮದಲ್ಲಿ ಬ್ಯಾಂಕ್ ದರೋಡೆಗೆ ವಿಫಲ ಯತ್ನ ನಡೆದಿದೆ. ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನಲ್ಲಿ ಖದೀಮರು ದರೋಡೆಗೆ ತಡರಾತ್ರಿ ಬ್ಯಾಂಕಿನ ಕಿಟಕಿಯನ್ನು ಕತ್ತರಿಸಿ ಕಳ್ಳರು ಒಳನುಗ್ಗಿದ್ದಾರೆ. ಬ್ಯಾಂಕ್ ಒಳಭಾಗದಲ್ಲಿರುವ ಲಾಕಾರ್ ಹೊಡೆಯಲು ಯತ್ನಿಸಿದ್ದಾರೆ.
ಲಾಕರ್ ಹೊಡೆಒಡೆಯಲು ಸಾಧ್ಯವಾಗದೆ ಕಳ್ಳರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಸದ್ಯ ಘಟನಾ ತಳಕೆ ನಾಗಮಂಗಲ ಗ್ರಾಮಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.