ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದ್ದು, ಕಾರಿಗೆ ಬೈಕ್ ಟಚ್ ಆಗಿದ್ದ ವಿಚಾರಕ್ಕೆ ನಡು ರಸ್ತೆಯಲ್ಲೇ ಗಲಾಟೆ ನಡೆದಿದೆ.
ಬೆಂಗಳೂರಿನ ಗಿರಿನಗರದ ಕೆರೆಕೋಡಿ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಓರ್ವ ಮಹಿಳೆ ಮತ್ತು ಪುರುಷರ ನಡುವೆ ಎಳೆದಾಟ, ಗಲಾಟೆ ನಡೆದಿದೆ. ನಡುರಸ್ತೆಯಲ್ಲೇ ಅವಾಚ್ಯವಾಗಿ ನಿಂದಿಸಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ.
ಗಲಾಟೆ ವೇಳೆ ಪರಸ್ಪರರಿಂದ 2 ವಾಹನಗಳ ಮಿರರ್ ಡ್ಯಾಮೇಜ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








