ಬೆಂಗಳೂರು : ಬೆಂಗಳೂರಿನಲ್ಲಿ ಮೇಲಿಂದ ಮೇಲೆ ರೋಡ್ ರೇಸ್ ಪ್ರಕರಣಗಳ ಸಂಖ್ಯೆ ಹೆಚ್ಚು ತಲೆ ಇವೆ ಇದೀಗ ಬೆಂಗಳೂರಿನ ಎಂಟನೇ ಮೈಲಿಯಲ್ಲಿ ಪವರ್ ಟೆಕ್ ವಿಚಾರವಾಗಿ ವಿದ್ಯಾರ್ಥಿಗಳ ಚಲಿಸುತ್ತಿದ್ದ ಕಾರು ಹಾಗೂ ಒಂದು ಕುಟುಂಬ ಚಲಿಸುತ್ತಿದ್ದ ಕಾರಿನವರ ಮಧ್ಯ ಹೊಡೆದಾಟ ನಡೆದಿದೆ.
ಹೌದು ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್ ಪ್ರಕರಣ ನಡೆದಿದ್ದು, ಓವರ್ಟೇಕ್ ವಿಷಯದಲ್ಲಿ ಎರಡು ಕಾರಿನ ಮಧ್ಯ ಬಡಿದಾಟ ನಡೆದಿದೆ. 8ನೇ ಮೈಲಿಯ ನವಯುಗ ಟೋಲ್ ನಲ್ಲಿ ಈ ಒಂದು ಘಟನೆ ನಡೆದಿದೆ. ಕಾರು ಪ್ರಾಯಾಣಿಕರ ಗಲಾಟೆ ದೃಶ್ಯ ಇದೀಗ ಮೊಬೈಲ್ನಲ್ಲಿ ಸೆರೆಯಾಗಿದೆ. ಒಂದು ಕಾರಿನಲ್ಲಿ ಕೇರಳದ ಕಾಲೇಜು ವಿದ್ಯಾರ್ಥಿಗಳು ಇದ್ದರು.
I-20 ಕಾರಿನಲ್ಲಿದ್ದ ಮೂವರು ವಿದ್ಯಾರ್ಥಿಗಳು ಇದ್ದರು ಇನ್ನು ಇನ್ನೊಂದು ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಕುಟುಂಬ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮತ್ತೊಂದು ಕಾರಿನಲ್ಲಿ ಇದ್ದ ಕುಟುಂಬ ಗಲಾಟೆ ಮಾಡಿದೆ. ವಿದ್ಯಾರ್ಥಿಗಳ ಕಾರನ್ನು ಬೆನ್ನಟ್ಟಿ ಟೋಲ್ ಬಳಿಗೆ ಹೊಡೆದಾಟ ನಡೆದಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








