ಬೆಳಗಾವಿ : ಇತ್ತೀಚಿಗೆ ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಗಾಂಜಾ, ಸಿಗರೇಟ್, ಗುಟ್ಕಾ ಹಾಗೂ ಎಣ್ಣೆ ಪಾರ್ಟಿ ಮಾಡುತ್ತಿರುವ ವಿಡಿಯೋ ಭಾರಿ ಸದ್ದು ಮಾಡಿತ್ತು. ಜೈಲಿನ ಮುಖ್ಯ ಅಧಿಕ್ಷಕಿ ಅನಿತಾ ಅವರು ಇದಕ್ಕೆಲ್ಲ ಬ್ರೇಕ್ ಹಾಕಿದಕ್ಕೆ ನನ್ನ ವಿರುದ್ಧ ಕೈದಿಗಳು ಪಿತೂರಿ ನಡೆಸಿದ್ದಾರೆ ಎಂದು ಅನಿತಾ ಕೂಡ ಆರೋಪಿಸಿದ್ದರು. ಇದೀಗ ಬೆಳಗಾವಿಯ ಹಿಂಡಲಗಾ ಜೈಲಿನ ಕರ್ಮಕಾಂಡ ಕೂಡ ಬಯಲಾಗಿದೆ.
ಹೌದು ಇಂದಿನಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಬೆಳಗಾವಿ ಹಿಂಡಲಗಾ ಜೈಲಿನ ಕೈದಿಗಳ ಐಷಾರಾಮಿ ಜೀವನ ಕೂಡ ಬಟಾ ಬಯಲಾಗಿದೆ. ಜೈಲಲ್ಲಿ ಇರುವ ಕೈದಿಗಳಿಗೆ ಗಾಂಜಾ, ಸಿಗರೇಟ್, ಬೀಡಿ ಸೇರಿದಂತೆ ಎಲ್ಲವೂ ಹೊರಗಿನಿಂದಲೇ ಸಪ್ಲೈ ಆಗುತ್ತಿದೆ. ಜೈಲಿನ ಸರ್ಕಲ್ ನಂಬರ್ 2ನೇ ಬ್ಯಾರಕ್ನಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಹಣ ಕೊಟ್ಟರೆ ಕೈದಿಗಳಿಗೆ ಇಪ್ಪತ್ತು ಸಾವಿರ ಬೆಲೆ ಆಂಡ್ರಾಯ್ಡ್ ಮೊಬೈಲ್ ಕೂಡ ಸಿಗುತ್ತಿದೆ.
ಶಿಕ್ಷೆ ಅನುಭವಿಸುತ್ತಿರುವ ಕೈದಿಯಿಂದಲೇ ಐಷಾರಾಮಿ ಜೀವನ ಅನಾವರಣವಾಗಿದೆ. ಜೈಲು ಅಧಿಕ ಕೃಷ್ಣಮೂರ್ತಿ.ಹಣ ಕೊಟ್ಟರೆ ಎಲ್ಲಾ ವ್ಯವಸ್ಥೆ ಮಾಡುತ್ತಾರಂತೆ. ನೆಲಮಂಗಲ ಮೂಲದ ಮುಬಾರಕ್ ಎಂಬ ಕೈದಿ ಇಸ್ಪೀಟ್ ಆಡುವ ವಿಡಿಯೋ ಮಾಡಿದ್ದಾನೆ ಎನ್ನಲಾಗಿದೆ. ಮೊಬೈಲ್ ಇಟ್ಟುಕೊಂಡು ಇಸ್ಪೀಟ್ ಆಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಬೆಳಗಾವಿಯ ಕೈದಿ ಸುರೇಶ್, ಶಾಹಿದ್ ಖುರೇಶಿ, ಆನಂದ್ ನಾಯಕ್ ಸೇರಿ ಹಲವರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.