ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 12 ಶೋ ಆರಂಭ ಆದ ದಿನದಿಂದಲೂ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಇತ್ತೀಚಿಗೆ ತಾನೇ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿತ್ತು. ಈಗ ನಟ ಕಿಚ್ಚ ಸುದೀಪ್ ವಿರುದ್ಧವೇ ಮಹಿಳಾ ಆಯೋಗದಲ್ಲಿ ಪ್ರಕರಣ ದಾಖಲಾಗಿದೆ.
ಹೌದು ಕಳೆದ ವೀಕೆಂಡ್ ನಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ಸುದೀಪ್ ಗರಂ ಆಗಿದ್ದು, ನನ್ನ ಪಿತ್ತ ನೆತ್ತಿಗೇರುತ್ತಲ್ಲ ಅದಕ್ಕಿಂತ ಮೊದಲು ಅಂತಾ ಬೈದಿದ್ರು. ಇದು ಮಹಿಳೆಗೆ ಆದ ಅವಮಾನ, ದರ್ಪ ಅಂತಾ ಸಂಧ್ಯಾ ಪವಿತ್ರ ಅನ್ನೋರು ಆಯೋಗದಲ್ಲಿ ದೂರು ದಾಖಲು ಮಾಡಿದ್ದಾರೆ. ಜೊತೆಗೆ ಬಿಡದಿ ಠಾಣೆಗೂ ದೂರು ಕೊಟ್ಟಿದ್ದಾರೆ. ಇನ್ನು ಸಂಧ್ಯಾ ದೂರು ಕೊಡುತ್ತಿದ್ದಂತೆ ಸುದೀಪ್ ಅಭಿಮಾನಿಗಳು ಧಮ್ಕಿ ಹಾಕುತ್ತಿದ್ದಾರೆ ಎಂದು ಸಂಧ್ಯಾ ಅಳಲು ತೋಡಿಕೊಂಡಿದ್ದಾರೆ.
ಇನ್ನು ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧವೂ ಆಯೋಗದ ಮೆಟ್ಟಿಲೇರಿರುವ ಸಂಧ್ಯಾ ರಕ್ಷಿತಾರನ್ನು ಎಸ್ ಕ್ಯಾಟಗರಿ, ಎಲ್ಲಿಂದ ಬಂದಿದ್ಯಾ ಗೊತ್ತು ಅಂತಾ ನಿಂದಿಸಿದ್ದಕ್ಕೆ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಇನ್ನೂ ರಿಷಾ ಬಟ್ಟೆಯನ್ನು ತಂದು ಬಾತ್ರೂಮ್ನಲ್ಲಿ ಬಿಸಾಕಿದಕ್ಕೆ ಗಿಲ್ಲಿ ವಿರುದ್ಧ ದೂರು ದಾಖಲಾಗಿತ್ತು. ಬಳಿಕ ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ ರಿಷಿಕಾ ವಿರುದ್ಧವೂ ದೂರು ನೀಡಿದ್ದಾರೆ.








