ಬೆಳಗಾವಿ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯದ ಬಳ್ಳಾರಿ ಬೆಳಗಾವಿ ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರಣಿ ಬಾಣಂತಿಯರ ಸಾವು ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿತು. ಈ ಒಂದು ಘಟನೆಯ ಬಳಿಕ ಎಚ್ಚರ ರಾಜ್ಯ ಸರ್ಕಾರ ಈ ಕುರಿತು ವರದಿ ಪಡೆದುಕೊಂಡಿತ್ತು.
ಇದೀಗ ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿಯ ಸಾವಾಗಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಬಾಣಂತಿಯೋರ್ವಳು ವೈದ್ಯರ ನಿರ್ಲಕ್ಷದಿಂದ ಮುತ್ತವ್ವ ಸಂತೋಷ ಗೊಳಸಂಗಿ (21) ಎನ್ನುವ ಬಾಣಂತಿ ಸಾವನಪ್ಪಿದ್ದಾಳೆ. ಜನವರಿ 31ಕ್ಕೆ ಮುತ್ತವ್ವಗೆ ವೈದ್ಯರು ಹೆರಿಗೆ ದಿನಾಂಕವನ್ನು ನೀಡಿದ್ದರು.
ಮುತ್ತವ್ವಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುತ್ತವ್ವಳ ಆರೋಗ್ಯದಲ್ಲಿ ಬಿಪಿಯಲ್ಲಿ ವ್ಯತ್ಯಾಸ ಆದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಹೆರಿಗೆ ಮಾಡಿಸಿದರು.ಆದರೆ ಶಸ್ತ್ರಚಿಕಿತ್ಸೆಯ ನಂತರ ತೀವ್ರ ರಕ್ತಸ್ರಾವದಿಂದ ಮುತ್ತವ್ವ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷದಿಂದಲೇ ಮುತ್ತವ್ವ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.