ಬೆಂಗಳೂರು : ನಾನು ಜನರಿಗಾಗಿ ಮೂರನೇ ಶಕ್ತಿಯನ್ನು ತರಲು ಸಿದ್ಧನಾಗಿದ್ದೇನೆ ನಾಳೆ ಕಲ್ಬುರ್ಗಿಯಲ್ಲಿ ಸಭೆ ನಡೆಸಿ ಪಕ್ಷದ ಚಿನ್ಹೆಯ ಬಗ್ಗೆ ನಿರ್ಧರಿಸುತ್ತೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಹಲವು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ನಿಮ್ಮ ಪಾರ್ಟಿಗೆ ಸೇರಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬಸವಣ್ಣ ಮತ್ತು ಅಂಬೇಡ್ಕರ್ ಸಿದ್ಧಾಂತದಂತೆ ನಡೆಯುತ್ತೇವೆ. ರಾಹುಲ್ ಗಾಂಧಿಗೆ ಇಂದಿರಾಗಾಂಧಿಯ ಶಕ್ತಿ ಬರಲಿಲ್ಲ ಮೋದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಶಕ್ತಿ ಬರಲಿಲ್ಲ ಕುರ್ಚಿ ಕಿತ್ತಾಟದ ವಿಚಾರದಲ್ಲಿ ಕರ್ನಾಟಕ ಇಬ್ಬಾಗ ಆಗುತ್ತದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಮಾರಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದರು.








