ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆ ಆಗಿದ್ದು ಹಣಕ್ಕಾಗಿ ಹೆತ್ತ ತಾಯಿಯನ್ನೇ ಪಾಪಿ ಮಗನೊಬ್ಬ ರಾಡ್ ನಿಂದ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿ, ಬಳಿಕ ಪರಾರಿ ಆಗಿರುವ ಘಟನೆ ಬೆಂಗಳೂರಿನ ಬಾಗಲಕುಂಟೆ ಮುನೇಶ್ವರ ನಗರದಲ್ಲಿ ಈ ಒಂದು ಹತ್ಯೆ ನಡೆದಿದೆ.
ಕಬ್ಬಿಣದ ರಾಡ್ ನಿಂದ ಹೊಡೆದು ಪಾಪಿ ಮಗ ಹೆತ್ತ ತಾಯಿಯನ್ನೆ ಕೊಂದಿದ್ದಾನೆ. ಬಾಗಲಕುಂಟೆಯ ಮುನೇಶ್ವರ ನಗರದಲ್ಲಿ ತಡರಾತ್ರಿ ಒಂದು ಘಟನೆ ನಡೆದಿದೆ. ಶಾಂತಾಬಾಯಿ ಎನ್ನುವ ತಾಯಿಯನ್ನು ಮಹೇಂದ್ರ ಸಿಂಗ್ ಎನ್ನುವ ಮಗ ಕೊಲೆ ಮಾಡಿ ಇದೀಗ ತಲೆಮರಿಸಿಕೊಂಡಿದ್ದಾನೆ. ಹಣಗೋಸ್ಕರ ಶಾಂತಾಬಾಯಿ ಅವರಿಗೆ ಆರೋಪಿ ಮಹೇಂದ್ರ ಸಿಂಗ್ ದಿನಾಲು ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.ನಿನ್ನೆ ರಾತ್ರಿ ಕೂಡ ಹಣಕ್ಕಾಗಿ ಕಿರುಕುಳ ನೀಡಿದ್ದು ಈ ವೇಳೆಯಿಂದ ತಲೆಗೆ ಬಲವಾಗಿ ಹೊಡೆದು ತಾಯನ್ನು ಕೊಂದು ಇದೀಗ ಆರೋಪಿ ಪರಾರಿಯಾಗಿದ್ದಾನೆ.