ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆ ನಡೆದಿದ್ದು, ಅಡ್ವಾನ್ಸ್ ಆಗಿ ಹಣ ಕೊಟ್ಟಿದ್ದ ಮಾಲೀಕನನ್ನೇ ತಂದೆ ಮಗ ಇಬ್ಬರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಡಬಗೆರೆ ಕ್ರಾಸ್ನ ಆರ್ ಆರ್ ಇಂಡಸ್ಟ್ರಿಯಲ್ಲಿ ರಮೇಶ್ ಎನ್ನುವ ವ್ಯಕ್ತಿಯ ಕೊಲೆಯಾಗಿದೆ. ಕೊಲೆಗೈದ ಆರೋಪಿಗಳನ್ನು ಸೈಯದ್ ತಾಜುದ್ದೀನ್ (50) ಸೈಯದ್ ಆಯೂಬ್ ಎನ್ನುವವರನ್ನು ಅರೆಸ್ಟ್ ಮಾಡಲಾಗಿದೆ. ರಮೇಶ್ ಬಳಿ ಇಬ್ಬರು ಕೆಲಸಗಾರರು 6 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರು ಎನ್ನಲಾಗಿದೆ. ಆದರೆ ಸರಿಯಾಗಿ ಕೆಲಸಕ್ಕೆ ಬಾರದೆ ಆರೋಪಿಗಳು ಸತಾಯಿಸುತ್ತಿದ್ದರು.
ಇಬ್ಬರು ಕೂಡ ಕೆಲಸ ಮಾಡದೆ ರಮೇಶನಿಗೆ ಬೆದರಿಕೆ ಹಾಕುತ್ತಿದ್ದರು. ಇಂದು ಮಧ್ಯಾಹ್ನ ಮಾಲೀಕ ರಮೇಶ್ ಜೊತೆಗೆ ಗಲಾಟೆ ಆಗಿದೆ. ಈ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಆರೋಪಿಗಳು ಮಾಲೀಕರನ್ನು ಕೊಲೆಗೈದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.