ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿಗೆ ಕ್ಷುಲ್ಲಕ ಕಾರಣಕ್ಕೆ ಕೊಲೆಗಳು ನಡೆಯುತ್ತಿವೆ. ಇಂದು ಕೂಡ ಭಾವ ಮತ್ತು ಬಾಮೈದನ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಈ ವೇಳೆ ಕೋಪಗೊಂಡ ಭಾವ ಬಾಮೈದನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಬಳಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ತಮಿಳುನಾಡಿನ ಸೇಲಂ ಮೂಲದ ವೆಂಕಟೇಶ್ ಎಂದು ತಿಳಿದುಬಂದಿದ್ದು, ಇನ್ನು ಹತ್ಯೆಗೈದ ಭಾವನನ್ನು ರಾಮ ಎಂದು ಗುರುತಿಸಲಾಗಿದೆ.ಮೃತ ವೆಂಕಟೇಶ್ ಹಾಗೂ ಬಾವ ರಾಮ ಎಂಬಾತ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ರೋಲ್ಡ್ ಗೋಲ್ಡ್ ಚೈನ್ ಮಾರಾಟ ಮಾಡುತ್ತಿದ್ದರು.
ಆದ್ರೆ ಇತ್ತೀಚೆಗೆ ಇಬ್ಬರ ನಡುವೆ ಚಿಕ್ಕ ಪುಟ್ಟ ಗಲಾಟೆಗಳಾಗುತ್ತಿತ್ತು, ಆದರೆ ಸೋಮವಾರ ಮತ್ತೆ ಬಾವ ಹಾಗೂ ಬಾಮೈದನ ನಡುವೆ ಕಿರಿಕ್ ಉಂಟಾಗಿದ್ದು, ಸಿಟ್ಟಿನಲ್ಲಿ ಆರೋಪಿ ರಾಮ ಕೈಗೆ ಸಿಕ್ಕ ಚಾಕುವಿನಲ್ಲಿ ಬಾಮೈದ ವೆಂಕಟೇಶ್ ಗೆ ಇರಿದು ಪರಾರಿ ಆಗಿದ್ದಾನೆ.ತಕ್ಷಣ ಅಲ್ಲಿಯ ಸಮೀಪ ಇದ್ದ ಆಂಬುಲೆನ್ಸ್ ನಲ್ಲಿ ಬ್ಯಾಂಡೇಜ್ ಹಾಕಿ ಏನು ಆಗಲ್ಲ ಎಂದು ಕಳಿಸಿದ್ದಾರೆ.
ಬಳಿಕ ವೆಂಕಟೇಶ್ ಮನೆಗೆ ಕರೆ ಮಾಡಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದಾನೆ. ಆದರೆ ರಾತ್ರಿ ರೈಲ್ವೇ ನಿಲ್ದಾಣದ ಬಳಿ ವೆಂಕಟೇಶ್ ಅಸ್ವಸ್ಥನಾಗಿ ಬಿದ್ದಿದ್ದ ಈ ವೇಳೆ ಪರಿಶೀಲಿಸಿದ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ.ಘಟನೆ ಕುರಿತು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಾಮನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.