ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಕೊಲೆಯಾಗಿದ್ದು ಸುಳ್ಳಾಗ ಕಾರಣಕ್ಕೆ ದಂಪತಿಗಳ ನಡುವೆ ಗಲಾಟೆ ನಡೆದಿದೆ ಈ ವೇಳೆ ಗಲಾಟೆ ವಿಕೋಪಕ್ಕೆ ಹೋದಾಗ ಅತಿ ಕೋಪದಲ್ಲಿ ಸುತ್ತಿಗೆಯಿಂದ ಹೊಡೆದು ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೆಮ್ಮಿಗೆಪುರದ ಗಾಣಪ್ಪ ಲೇಔಟ್ ನಲ್ಲಿ ಒಂದು ಕೊಲೆ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಭಾಗ್ಯ ಎಂದು ತಿಳಿದುಬಂದಿದ್ದು, ಪತಿ ಶ್ರೀ ರಾಮ ಕೊಲೆ ಆರೋಪಿಯಾಗಿದ್ದಾನೆ. ಭಾಗ್ಯ ಹಾಗು ಶ್ರೀ ರಾಮನ ನಡುವೆ ಇಂದು ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಭಾಗ್ಯಾಳನ್ನು ಪತಿ ಶ್ರೀರಾಮ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಹಾಗೂ ಎಫ್ ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಕೊಲೆ ಕುರಿತಂತೆ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.