ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆಯಾಗಿದ್ದು ಕುಡಿದ ಮತ್ತಿನಲ್ಲಿ ಪತಿ-ಪತ್ನಿಯ ಮೇಲೆ ರಾಡ್ ನಿಂದ ಹಲ್ಲೆ ಮಾಡಿ ಬಳಿಕ ನೇಣು ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಗುಡ್ನಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಲೆಯನ್ನು ನೂಕಲಮ್ಮ ಎಂದು ತಿಳಿದುಬಂದಿದ್ದು, ಒಡಿಶಾ ಮೂಲದ ದಂಪತಿಗಳಾದ ಗೌರಿ ಹಾಗು ಆತನ ಪತ್ನಿ ನೂಕಲಮ್ಮ ಕೃಷ್ಣಾರೆಡ್ಡಿ ಎಂಬುವವರ ಇಟ್ಟಿಗೆ ಕಾರ್ಖಾನೆಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ಪ್ರತಿದಿನ ಕುಡಿದು ಪತ್ನಿ ಜೊತೆಗೆ ಪತಿ ಗೌರಿ ಗಲಾಟೆ ಮಾಡುತ್ತಿದ್ದ. ನಿನ್ನೆ ರಾತ್ರಿ ಕಬ್ಬಿಣದ ರಾಡ್ ಇಂದ ಹೊಡೆದು ನೇಣು ಬಿಗಿದು ಭೀಕರವಾಗಿ ಕೊಲೆ ಮಾಡಿದ್ದಾನೆ.ಇದೀಗ ನೂಕಲಮ್ಮ ಶವವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.