ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಆಸ್ತಿ ಭಾಗ ಮಾಡಿದ್ದರಲ್ಲಿ ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ಅನ್ನು ತೆಗೆದುಕೊಂಡು ಹೋಗಿದ್ದಕ್ಕೆ, ಅಣ್ಣ-ತಮ್ಮನ ನಡುವೆ ಗಲಾಟಿ ನಡೆದಿದೆ. ಈ ವೇಳೆ ಸಿಟ್ಟಿಗೆದಂತಹ ಅಣ್ಣ ತಮ್ಮನ ಮೇಲೆ ಅದೇ ಟ್ರ್ಯಾಕ್ಟರ್ ಹರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಎರಗಟ್ಟಿ ತಾಲೂಕಿನಲ್ಲಿ ನಡೆದಿದೆ
ಹೌದು ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಕ್ಕೆ ಭೀಕರ ಕೊಲೆ ನಡೆದಿದ್ದು, ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ ನಡೆದಿದೆ. ಮಾರುತಿ ಬಾವಿಹಾಳ (30) ಎನ್ನುವವನಿಂದ ತನ್ನ ತಮ್ಮ ಗೋಪಾಲ್ (27) ನನ್ನು ಟ್ರಾಕ್ಟರ್ ಹರಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ. ವರ್ಷದ ಹಿಂದೆ ಆಸ್ತಿ, ಟ್ರ್ಯಾಕ್ಟರ್ ಹಾಗೂ ಮನೆಯನ್ನು ಭಾಗ ಮಾಡಿಕೊಂಡಿದ್ದರು.
ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ಅನ್ನು ತಮ್ಮ ಗೋಪಾಲ ತನ್ನ ಹೆಂಡತಿ ಮನೆಯಲ್ಲಿ ಇಟ್ಟಿದ್ದ. ಇದರಿಂದ ಹಲವು ಬಾರಿ ತಮ್ಮನ ಜೊತೆಗೆ ಅಣ್ಣ ಮಾರುತಿ ಜಗಳ ತೆಗೆದಿದ್ದಾನೆ. ನಿನ್ನೆ ಇದೇ ವಿಚಾರಕ್ಕೆ ಗಲಾಟೆ ಆಗಿ ಅದೇ ಟ್ರ್ಯಾಕ್ಟರ್ ಹರಿಸಿ ತಮ್ಮನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಕುರಿತಂತೆ ಯರಗಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.