ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆಯಾಗಿ ಸೈಯ್ಯದ್ ಇಮ್ತಿಯಾಜ್ ಎಂಬ ಯುವಕ ಯುವತಿಗೆ ಕೈ ಕೊಟ್ಟಿದ್ದು, ಇದೀಗ ಯುವತಿ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ನ್ಯಾಯಕ್ಕಾಗಿ ಅಲೆದಾಡುತ್ತಿರುವ ಘಟನೆ ವರದಿಯಾಗಿದೆ.
ಹೌದು ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಯುವತಿಗೆ ಹೆಣ್ಣು ಮಗು ಕೊಟ್ಟು ಸೈಯದ್ ಇಮ್ತಿಯಾಜ್ ಪರಾರಿಗಿದ್ದಾನೆ. ಬೆಂಗಳೂರಿನ ಬಿಟಿಎಂ ನಿವಾಸಿ ಆಗಿರುವ ಸೈಯದ್ ಇಮ್ತಿಯಾಜ್ ಪರಾರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೊಲ್ಕತ್ತಾದ ಹಿಂದೂ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಆ ಯುವತಿಯನ್ನು ಈತನೇ ಇಸ್ಲಾಮಿಗೆ ಪರಿವರ್ತನೆ ಮಾಡಿ ನಂತರ ಜೈನದ್ ಎಂದು ಮರು ನಾಮಕರಣ ಮಾಡಿದ್ದ.
2025 ಜುಲೈ 18 ತಾರೀಕು ಇಬ್ಬರು ರಿಜಿಸ್ಟರ್ ಮದುವೆ ಆಗಿದ್ದಾರೆ. 2025ರಲ್ಲಿ ಆಕೆಗೆ ಗರ್ಭಪಾತ ಮಾಡಿಸಿದ್ದು, ಬಳಿಕ ಯುವತಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಕೊಲ್ಕತ್ತಾದಲ್ಲಿ ತಾಯಿ ಮಗುವನ್ನು ಬಿಟ್ಟು ಸೈಯದ್ ಪರಾರಿ ಆಗಿದ್ದಾನೆ. ಈ ಕುರಿತು ಆತನ ವಿರುದ್ಧ ಯುವತಿ ದೂರು ದಾಖಲು ಮಾಡಿದ್ದು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಳೆ.








