ಬೆಂಗಳೂರು : ಕುಡಿದ ಮತ್ತಿನಲ್ಲಿ ತಮ್ಮ ಸಹೋದ್ಯೋಗಿಯನ್ನೇ ಭೀಕರವಾಗಿ ಕೊಂದಿರುವ ಘಟನೆ ಬೆಂಗಳೂರಿನ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಬಿಹಾರ ಮೂಲದ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ. ಸಜಿತ್ (34) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಎಣ್ಣೆಯ ನಶೆಯಲ್ಲಿ ಗಲಾಟೆ ಮಾಡಿ ಸಹೋದ್ಯೋಗಿಯನ್ನು ಕೊಂದಿದ್ದಾರೆ. ಮೈಕೋಲೇಔಟ್ ಬಳಿಯ ಪುಟ್ಟಪ್ಪ ಗಾರ್ಡನ್ನಲ್ಲಿ ಈ ಒಂದು ಕೊಲೆ ನಡೆದಿದೆ.
ನಿನ್ನೆ ರಾತ್ರಿ ಎಣ್ಣೆಯ ಮತ್ತಿನಲ್ಲಿ ದೊಣ್ಣೆಗಳಿಂದ ಹೊಡೆದು ಸಹೋದ್ಯೋಗಿ ಸಜಿತ್ ಎನ್ನುವವನನ್ನು ಕೊಲೆ ಮಾಡಿದ್ದಾರೆ. ಇಂಟರಿಯರ್ ಡಿಸೈನ್ ಗೌಡನಲ್ಲಿ ಸಜಿತ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದೂ, ಕೊಲೆ ಕುರಿತಂತೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.