ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು ಶೆಡ್ ನಲ್ಲಿ ಇದ್ದಂತಹ 6 ಹಸುಗಳು ಸಜೀವವಾಗಿ ದಹನಗೊಂಡಿರುವ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯ ಶಾಂಪುರ ರಸ್ತೆಯಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ.
ನಲ್ಲಿದ್ದ 20 ಜಾನುವಾರುಗಳ ಪೈಕಿ 6 ಹಸುಗಳು ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿವೆ. ಬೆಂಗಳೂರಿನ ಡಿಜೆ ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿರೋ ಹಸುಗಳ ಶೆಡ್ನಲ್ಲಿ ಭಾರೀ ದುರಂತ ಸಂಭವಿಸಿದೆ. ಫ್ಲೈವುಡ್ ಅಂಗಡಿಗೆ ಹೊತ್ತಿಕೊಂಡಿದ್ದ ಬೆಂಕಿಯ ತೀವ್ರತೆ ಹೆಚ್ಚಾಗಿ ಹಸುಗಳ ಶೆಡ್ಗೂ ವ್ಯಾಪಿಸಿದೆ. ಈ ಶೆಡ್ನಲ್ಲಿ ಒಟ್ಟು 20 ಹಸುಗಳಿದ್ದವು ಎನ್ನಲಾಗ್ತಿದೆ. ಇದರಲ್ಲಿ 6 ಹಸುಗಳು ಸಾವನ್ನಪ್ಪಿದ್ದು, 3 ಹಸುಗಳು ಸುಟ್ಟ ಗಾಯಗಳಿಂದ ನರಳುತ್ತಿವೆ.
ತಕ್ಷಣ ಸ್ಥಳೀಯರು ಸ್ಥಳಕ್ಕೆ ದಾವಿಸಿದ್ದು, 14 ಹಸುಗಳನ್ನ ರಕ್ಷಣೆ ಮಾಡಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಬಂದ ನಾಲ್ಕು ಅಗ್ನಿ ಶಾಮಕ ವಾಹಗಳು ಬೆಂಕಿ ನಂದಿಸುವ ಕಾರ್ಯ ನಡೆಸಿ ಯಶಸ್ವಿಯಾಗಿದೆ. ಇದೇ ವೇಳೆ ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಗಾಯಗೊಂಡಿರುವ ಹಸುಗಳಿಗೆ ಪಶು ವೈದ್ಯರು ಬಂದು ಚಿಕಿತ್ಸೆ ನೀಡುತ್ತಿದ್ದಾರೆ.








