ಮೈಸೂರು : ರಾಜ್ಯದಲ್ಲಿ ಇಂದು ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಮೈಸೂರಿನಲ್ಲಿ ಬೈಕ್ ಒಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರನ ರುಂಡವೆ ಕಟ್ ಆಗಿದೆ. ಈ ಒಂದು ಅಪಘಾತದಲ್ಲಿ ಹಿಂಬದಿ ಸವಾರ ಕೂಡ ಸಾವನಪ್ಪಿದ್ದಾನೆ.
ಹೌದು ಲಾರಿ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರನ ತಲೆ ಕಟ್ ಆಗಿ ಹಾರಿಹೋದ ಘಟನೆ ಮೈಸೂರು ಜಿಲ್ಲೆಯ ಗೊರಹಳ್ಳಿ ಕೆರೆ ಏರಿಯ ಮೇಲೆ ನಡೆದಿದೆ. ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಮೃತರನ್ನು ಶೇಖರ್ (26) ಹಾಗೂ ಶಂಕರ್ (25) ಎಂದು ಗುರುತಿಸಲಾಗಿದೆ. ಇಬ್ಬರೂ ಪಿರಿಯಾಪಟ್ಟಣ ತಾಲೂಕು ಹಿಟ್ನೆಬಾಗಿಲು ಗ್ರಾಮದ ಯುವಕರು ಎಂದು ತಿಳಿದು ಬಂದಿದೆ. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.