ಕಲಬುರ್ಗಿ : ಕಳೆದ ಕೆಲವು ದಿನಗಳ ಹಿಂದೆ ಕಲ್ಬುರ್ಗಿಯಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಸಂಬಂಧ ಹಲವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದ್ದು, ಉದ್ಯಮಿಯಿಂದ 34 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಉದ್ಯಮಿಯು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೌದು ಕಲ್ಬುರ್ಗಿಯಲ್ಲಿ ನವ ಉದ್ಯಮಿಯಿಂದ ಲಕ್ಷಾಂತರ ರೂಪಾಯಿಯನ್ನು ಹನಿಟ್ರ್ಯಾಪ್ ಮೂಲಕ ದೋಚಿದ್ದಾರೆ.ಆದರೆ ಈ ಹಿಂದಿನ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳಿಂದಲೇ ಈ ಒಂದು ಹನಿಟ್ರ್ಯಾಪ್ ನಡೆದಿದೆ ಎಂದು ಆಘಾತಕಾರಿ ವಿಷಯ ಬಯಲಾಗಿದೆ. ಈ ಪ್ರಕರಣದಲ್ಲೂ ಪ್ರಭು ಹಿರೇಮಠ, ರಾಜು ಲೇಂಗಟಿ ಪ್ರಮುಖ ಆರೋಪಿಳಾಗಿದ್ದಾರೆ.
ಉದ್ಯಮಿ ವಿನೋದಕುಮಾರ ಖೇಣಿ ವ್ಯಾಪಾರಿಯಾಗಿದ್ದು, ಇವರ ಅಂಗಡಿಗೆ ಆರೋಪಿ ಪ್ರಭು ಹಿರೇಮಠ ಖಾಯಂ ಬರುತ್ತಿದ್ದನು. ಆರೋಪಿ ಪ್ರಭು ಹಿರೇಮಠ ಖಾಯಂ ಗ್ರಾಹಕನಾಗಿದ್ದರಿಂದ ಉದ್ಯಮಿ ವಿನೋದಕಮಾರ್ ಆತನ ಜೊತೆ ಗೆಳತನ ಬೆಳಸಿದ್ದರು. ಈ ವೇಳೆ ಪ್ರಭು ಹಿರೇಮಠ ಮಹಾರಾಷ್ಟ್ರದ ಪೂಜಾ ಎನ್ನುವ ಯುವತಿಗೆ ವಿನೋದಕುಮಾರ ಖೇಣಿ ಮೊಬೈಲ್ ನಂಬರ್ ಕಳುಹಿಸಿದ್ದಾನೆ. ಆ ಬಳಿಕ ಪೂಜಾ ಉದ್ಯಮಿಗೆ ಮೆಸೇಜ್ ಮಾಡಿ ಪರಿಚಯ ಮಾಡಿಕೊಂಡಿದ್ದಾಳೆ.
ಕಳೆದ ಮೇನಲ್ಲಿ ವಿನೋದ್ ಕುಮಾರ್ ಕೆಲಸದ ಮೇಲೆ ನಾನು ಹೈದರಾಬಾದ್ ಗೆ ಹೋಗುತ್ತಿರುವುದಾಗಿ ಪೂಜಾಗೆ ತಿಳಿಸಿದ್ದಾನೆ. ಇದನ್ನು ತಿಳಿದ ಪೂಜಾ ಅವತ್ತಿನ ದಿನವೇ ಆಕೆಯು ಹೈದರಾಬಾದ್ ಗೆ ತೆರಳಿ ಅಲ್ಲಿ ವಿನೋದ್ ಕುಮಾರ್ ನನ್ನು ಭೇಟಿಯಾಗಿ ಇಬ್ಬರು ಒಂದು ಲಾಡ್ಜ್ ನಲ್ಲಿ ತಂಗಿದ್ದಾರೆ.ಬಳಿಕ, ಪೂಜಾ ರೂಮಿನಲ್ಲಿ ಮತ್ತು ಕಾರಿಡಾರನಲ್ಲಿ ವಿನೋದಕುಮಾರ್ ಅವರನ್ನು ತಬ್ಬಿಕೊಂಡು, ಮುತ್ತು ಕೊಟ್ಟು, ತನ್ನ ಮೊಬೈಲನಲ್ಲಿ ಫೋಟೋ ತೆಗೆದುಕೊಂಡಿದ್ದಾಳೆ.
ನಂತರ ವಿನೋದ್ ಕುಮಾರ್ ಬೆಂಗಳೂರಿನಲ್ಲೂ ಪೂಜಾಳನ್ನು ಭೇಟಿಯಾಗಿ ಅಲ್ಲಿ ಕೆಲವು ಸ್ಥಳಗಳಲ್ಲಿ ಕುಳಿತುಕೊಂಡು ಪೂಜಾ ವಿನೋದ್ ಕುಮಾರ ನಿಂದ ಸೆಲ್ಫಿ ತೆಗೆದುಕೊಂಡಿದ್ದಾಳೆ. ಬಳಿಕ, ವಿನೋದಕುಮಾರ್ ಮರಳಿ ಊರಿಗೆ ಬಂದಾಗ ಆರೋಪಿ ಪ್ರಭು ಹಿರೇಮಠ ಈ ಫೋಟೋಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡಿ, ಬೆದರಿಕೆ ಹಾಕಿ ನಗದು, ಚೆಕ್ ಮತ್ತು ಫೋನ್ ಪೇ ಮೂಲಕ 34 ಲಕ್ಷ ರೂ. ದೂಚಿದ್ದಾರೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.