ಗದಗ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಪ್ರೀತಿಯ ನಾಟಕವಾಡಿ ಇಬ್ಬರು ಮುಸ್ಲಿಂ ಯುವಕರು ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್ ಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಗದಗದಲ್ಲಿ ನಡೆದಿದೆ.
ಹೌದು ಬಾಲಕಿಯ ಜೊತೆ ಪ್ರೀತಿ ಮಾಡುವ ನಾಟಕವಾಗಿ ದುರುಳರಿಂದ ಅತ್ಯಾಚಾರ ನಡೆದಿದೆ ಎಂದು ಗದಗದಲ್ಲಿ ಎಸ್ಪಿ ಬಿಎಸ್ ನೇಮಗೌಡ ಹೇಳಿಕೆ ನೀಡಿದ್ದಾರೆ. ಏಪ್ರಿಲ್ 19 ರಂದು ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾರೆ. ಸಮೀರ್ ಎಂಬ ಯುವಕ ಬಾಲಕಿಗೆ ಪ್ರೀತಿ ಮಾಡುವ ನಾಟಕವಾಡಿದ್ದಾನೆ.
ಈ ವೇಳೆ ಬಾಲಕಿ ಮೇಲೆ ಸಮೀರ್ ಅತ್ಯಾಚಾರ ಮಾಡಿದ ಬಳಿಕ ಸ್ನೇಹಿತ ಉಮರ್ ನಿಂದ ಅತ್ಯಾಚಾರ ನಡೆದಿದೆ. ಆರೋಪಿಗಳಿಗೆ ಲಾಡ್ಜ್ ಬುಕ್ ಮಾಡಲು ಜಾಕೀರ್ ಹುಸೇಲ್ ಎಂಬಾತ ಸಹಕರಿಸಿದ ಎನ್ನಲಾಗಿದೆ.ಘಟನೆಯ ಬಳಿಕ ಬಾಲಕಿಯ ತಾಯಿ ದೂರು ನೀಡಿದ ಹಿನ್ನೆಲೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೇ ಬೀಸಲಾಗಿದೆ ಎಂದು ಎಸ್ ಪಿ ಬಿಎಸ್ ನೇಮಗೌಡ ಅವರು ತಿಳಿಸಿದರು.