ಬೆಂಗಳೂರು : ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಭೀಕರವಾದ ಅಗ್ನಿ ಅವಘಡ ಸಂಭವಿಸಿದೆ.ಕೂಲಿ ಕಾಲೋನಿಯಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದ್ದು ಕಳೆದ ರಾತ್ರಿ ಈ ಒಂದು ಅಗ್ನಿ ದುರಂತ ಸಂಭವಿಸಿದೆ.
ರಾತ್ರಿ 2 ಗಂಟೆ ಸುಮಾರಿಗೆ ಘಟನೆಯಲ್ಲಿ 11 ಮನೆಗಳಿಗೆ ಹಾನಿಗಳಾಗಿದ್ದು 11ಕ್ಕೂ ಹೆಚ್ಚು ಬೈಕ್ ಗಳು ಹಾಗೂ ಗೂಡ್ಸ್ ಆಟೋಗಳು ಬೆಂಕಿಗೆ ಸುಟ್ಟು ಸಂಪೂರ್ಣವಾಗಿ ಕರಕಲಾಗಿವೆ. ಕಿಡಿಗೇಡಿಗಳು ಈ ಒಂದು ಕೃತಿ ಹರಿದಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.








