ಬೆಂಗಳೂರು : ಕಾಂಗ್ರೆಸ್ಸಿನ ಮಾಜಿ ಸಂಸದ ಡಿಕೆ ಸುರೇಶ್ ಅವರ ಹೆಸರು ಹೇಳಿ ವಂಚನೆ ಎಸಗಿದ್ದ ಐಶ್ವರ್ಯಗೌಡ ವಿರುದ್ಧ ಇದೀಗ ಮತ್ತೊಂದು FIR ದಾಖಲಾಗಿದ್ದು, ಸ್ತ್ರೀ ರೋಗ ತಜ್ಞೆ ಮಂಜುಳಾ ಪಾಟೀಲ್ ಅವರ ಬಳಿ 2.52 ಕೋಟಿ ಹಣ ಅಲ್ಲದೇ 2 ಕೆಜಿಗು ಅಧಿಕ ಚಿನ್ನ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು ವೈದ್ಯೆ ಮಂಜುಳ ಪಾಟೀಲ್ ಅವರ ಕ್ಲಿನಿಕ್‌ಗೆ ಬಂದು ಐಶ್ವರ್ಯಗೌಡ ತಾನು ಡಿಕೆ ಸುರೇಶ್ ತಂಗಿ ಎಂದು ಹೇಳಿ ವೈದ್ಯೆಯನ್ನು ಪರಿಚಯ ಮಾಡಿಕೊಂಡಿದ್ದರು. ಜೊತೆಗೆ ಗೋಲ್ಡ್ ಬಿಸಿನೆಸ್, ಕೆಸಿನೊ, ಹಾಗೂ ದೊಡ್ಡ ಮಟ್ಟದಲ್ಲಿ ಬಿಸಿನೆಸ್ ಮಾಡುತ್ತಿರುವುದಾಗಿ ತಿಳಿಸಿದ್ದಳು. 2022ರಿಂದ ಹಂತ ಹಂತವಾಗಿ ಹೂಡಿಕೆ ನೆಪದಲ್ಲಿ ಐಶ್ವರ್ಯಾಗೌಡ ಹಣ ಪಡೆದಿರುತ್ತಾಳೆ.
ಒಟ್ಟು 2.52 ಕೋಟಿ ಹಣ ಹಾಗೂ 2.350 ಕೆಜಿ ಚಿನ್ನಾಭರಣ ಪಡೆದು ವಂಚನೆ ಮಾಡಿದ್ದಾಳೆ ಎಂದು ವೈದ್ಯೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಚಂದ್ರಲೇಔಟ್‌ನಲ್ಲಿ ಎಫ್‌ಐಆರ್ ದಾಖಲಾಗಿದ್ದ ಬಗ್ಗೆ ತಿಳಿದು ವೈದ್ಯೆ ಶಾಕ್‌ಗೆ ಒಳಗಾಗಿದ್ದರು. ಬಳಿಕ ವೈದ್ಯೆ ಮನೆ ಬಳಿ ಹೋಗಿ ಐಶ್ವರ್ಯ ಡ್ರೈವರ್ ಧನಂಜಯ್ಯ ಐಶ್ವರ್ಯಾಗೆ ಕಾಲ್ ಮಾಡಿ ಕೊಟ್ಟಿದ್ದ. ಕೊಟ್ಟಿರುವ ಹಣದ ಬಗ್ಗೆ ದೂರು ಕೊಟ್ಟರೆ ಸರಿ ಇರಲ್ಲ ಎಂದು ಫೋನ್‌ನಲ್ಲಿ ಐಶ್ವರ್ಯಾ ಬೆದರಿಕೆ ಹಾಕಿದ್ದರು.
ಜೊತೆಗೆ ಹಣ ಕೇಳಲು ಮನೆ ಬಳಿ ಹೋದಾಗಲೂ ಕೂಡ ಐಶ್ವರ್ಯ ಡ್ರೈವರ್‌ಗಳಾದ ಅಶ್ವಥ್ ಹಾಗೂ ಧನಂಜಯ್ಯ ಬೆದರಿಕೆ ಹಾಕಿದ್ದರು.ಸದ್ಯ ಈ ಸಂಬಂಧ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಗೌಡ ಹಾಗು ಇಬ್ಬರು ಡ್ರೈವರ್‌ಗಳಾದ ಅಶ್ವಥ್ ಗೌಡ ಹಾಗೂ ಧನಂಜಯ್ಯನ ವಿರುದ್ಧ ಎಫ್‌ಐಆಆರ್ ದಾಖಲಾಗಿದೆ.