ಬೆಂಗಳೂರು : ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದ್ದು ದುಬಾರಿ ದುನಿಯಾದಲ್ಲಿ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಸದ್ಯದಲ್ಲೇ ಆಟೋ ಮೀಟರ್ ದರ ಏರಿಕೆ ಆಗೋದು ಫಿಕ್ಸ್ ಎಂದು ತಿಳಿದು ಬಂದಿದು, ಆಟೋ ದರ ಏರಿಕೆ ಮಾಡಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಸಿಎಂ ಮತ್ತು ಸಾರಿಗೆ ಸಚಿವರ ಒಪ್ಪಿಗೆಗೆ ಆರ್‌ಟಿಎ ಕಾಯುತ್ತಿದೆ. ಆದೇಶಕ್ಕಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಾಯುತ್ತಿದೆ ಎಂದು ತಿಳಿದುಬಂದಿದೆ.
ಹೌದು ಆಟೋ ಮೀಟರ್ ಮಿನಿಮಮ್ ದರ 36 ರೂಪಾಯಿಗೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ 36. ಮಿನಿಮಮ್ ಚಾರ್ಜ್ ಮೂವತ್ತರಿಂದ ಮೂವತ್ತಾರು ರೂಪಾಯಿ ಏರಿಕೆ ಫಿಕ್ಸ್ ಎಂದು ತಿಳಿದು ಬಂದಿದೆ 18 ರೂಪಾಯಿ ಹೆಚ್ಚಳ ಮಾಡುವ ಸಾಧ್ಯತೆ ಇದೆ 15 ರೂಪಾಯಿ ಇದ್ದ ಚಾರ್ಜ್ 18 ರೂಪಾಯಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಸಲು ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಆಟೋ ಸಂಘಟನೆಗಳಿಂದ ಮನವಿ ಸಲ್ಲಿಸಲಾಗಿದೆ ಹಾಗಾಗಿ ಪ್ರತಿ ಕಿ.ಮೀ ಗೆ 18 ರೂಪಾಯಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈಗಾಗಲೇ ಹೊಸ ವರ್ಷದ ಆರಂಭದಲ್ಲಿ ಕೆಎಸ್ಆರ್ಟಿಸಿ ಮೆಟ್ರೋ ಟಿಕೆಟ್ ಪ್ರಯಾಣದ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ, ಆಟೋ ದರ ಹೆಚ್ಚಳ ಮಾಡುವುದರ ಕುರಿತು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ ಆಟೋ ದರ ಏರಿಕೆ ಮಾಡಿದರೆ ಬದುಕುವುದು ಹೇಗೆ? ದಿನಗೂಲಿ ನೌಕರರು ದಿನಕ್ಕೆ 200 ರೂಪಾಯಿ ಗಳಿಸುತ್ತಾರೆ. ಪ್ರತಿದಿನ 40 ರಿಂದ 50 ರೂಪಾಯಿ ಆಟೋಗೆ ಕೊಟ್ಟರೆ ಜೀವನ ತುಂಬಾ ಕಷ್ಟವಾಗುತ್ತದೆ 80% ಆಟೋ ಚಾಲಕರು ಮೀಟರ್ ಹಾಕುವುದೇ ಇಲ್ಲ. ಒನ್ ಟು ಡಬಲ್ ಆಟೋ ಚಾರ್ಜ್ ಕೇಳುತ್ತಾರೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.