ನವದೆಹಲಿ : ಪಹಲ್ಗಾಮ್ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ಇದೀಗ ಮತ್ತೊಮ್ಮೆ ಬಯಲಾಗಿದೆ. ಹೌದು ಗಡಿ ಭಾಗದಲ್ಲಿ ಸೇನಾವಾಹನಗಳ ಚಲನವಲನಗಳ ಕುರಿತಂತೆ ಭಾರತೀಯ ಸೇನಾಧಿಕಾರಿಯಂತೆ ಗಡಿಭಾಗದ ಟೋಲ್ ಪ್ಲಾಜ ಗಳಿಗೆ ನಿರಂತರವಾಗಿ ಕರೆ ಬರುತ್ತಿದ್ದು, ಐಎಸ್ಐ ಕರೆ ಮಾಡಿ ಮಾಹಿತಿ ಕೇಳುತ್ತಿದೆ ಎನ್ನಲಾಗಿದೆ.
ಸೇನಾ ವಾಹನಗಳ ಚಲನವಲನಗಳನ್ನು ಕೇಳುತ್ತಿರುವ ಐಎಸ್ಐ ಭಾರತೀಯ ಸೇನೆಗೆ ನಿರಂತರವಾಗಿ ಕರೆಗಳು ಬರುತ್ತಿವೆ. ಪಾಕಿಸ್ತಾನದ ಮತ್ತೊಂದು ಕುತಂತ್ರ ಈ ಮೂಲಕ ಬಟಾ ಬಯಲಾಗಿದೆ. ಗಡಿಭಾಗದ ಟೋಲ್ ಪ್ಲಾಜಗಳಿಗೆ ಐಎಸ್ಐ ನಿರಂತರವಾಗಿ ಕರೆ ಮಾಡುತ್ತಿದೆ. ಭಾರತೀಯ ಸೇನಾಧಿಕಾರಿಗಳಂತೆ ಫೋನ್ ಕರೆ ಮಾಡಿ ಸೇನಾ ವಾಹನಗಳ ಚಲನೆಯ ಮಾಹಿತಿ ಕೇಳುತ್ತಿದೆ ಎನ್ನಲಾಗಿದೆ.
ಇನ್ನು ಉಗ್ರ ಮನೆಗಳನ್ನು ದ್ವಂಸ ಮಾಡಿದ್ದರ ಹಿನ್ನೆಲೆಯಲ್ಲಿ ಅಧಿಕಾರ ತಿಳಿಸಿಕೊಳ್ಳುವುದಕ್ಕೆ ಉಗ್ರರು ಮತ್ತೆ ಜಮ್ಮು ಕಾಶ್ಮೀರದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ 84 ಪ್ರವಾಸಿ ತಾಣಗಳ ಪೈಕಿ 48 ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿಷೇಧ ಹೇರಿದೆ.








