ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡಿ ಸಂಕಷ್ಟ ಎದುರಿಸುತ್ತಿದ್ದಾರೆ ಇದರ ಮಧ್ಯೆ ಅವರ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದ್ದು ಬೇನಾಮಿ ಆಸ್ತಿ ಖರೀದಿಸಿದ ಆರೋಪದಲ್ಲಿ ಸ್ನೇಹಮಯಿ ಕೃಷ್ಣ ಅವರು ಈಗ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಹೌದು ಎಂ ಸಿದ್ದರಾಮಯ್ಯ ವಿರುದ್ಧ ಬೇನಾಮಿ ಆಸ್ತಿ ಖರೀದಿಸಿದ ಆರೋಪದ ಅಡಿ ದೂರು ಸಲ್ಲಿಕೆ ಆಗಿದೆ. ಮೈಸೂರು ಲೋಕಾಯುಕ್ತ ಕಚೇರಿಗೆ ಸ್ನೇಹಮಯಿ ಕೃಷ್ಣ ಅವರಿಂದ ಸಿಎಂ ಸಿದ್ದರಾಮಯ್ಯ ಬೇನಾಮಿ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಬೇನಾಮಿ ಆಸ್ತಿ ಖರೀದಿಸಿರುವ ಆರೋಪ ಕೇಳಿ ಬಂದಿದೆ ಮೈಸೂರು ತಾಲೂಕಿನ ಆಲನಹಳ್ಳಿ ಭೂಮಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ವೆ ನಂಬರ್ 113/4 ರಲ್ಲಿ 1 ಎಕರೆ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
1983ರ ಡಿಸೆಂಬರ್ 15 ರಂದು ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದ ಹನುಮಗೌಡ, ಹನುಮಯ್ಯ, ಕರಿಯಪ್ಪ ಮತ್ತು ಕೇತಮ್ಮ ಅವರಿಂದ ಭೂಮಿ ಖರೀದಿಸಿಲಾಗಿತ್ತು. ಭೂಮಿ ಖರೀದಿಸಿದ್ದ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ. 1996 ರಲ್ಲಿ ಆಲನಹಳ್ಳಿ 2ನೇ ಹಂತಕ್ಕಾಗಿ ಭೂಮಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.ಅಂತಹ ಅಧಿಸೂಚನೆ ಆಗಿರುವ ಭೂಮಿಯನ್ನು ಸಿಎಂ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಡಿನೋಟಿಫಿಕೇಷನ್ ಮಾಡಿಸಿದ್ದ 2006ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಕೃಷಿ ಭೂಮಿ ಅನ್ಯಕ್ರಾಂತ ಮಾಡಿ ಆದೇಶ ನೀಡಲಾಗಿತ್ತು. ಅದೇ ಭೂಮಿಯನ್ನು ಸಿಎಂ ಪತ್ನಿ ಪಾರ್ವತಿ ಅವರಿಗೆ 2010 ಅಕ್ಟೋಬರ್ 20ರಂದು ಪಾರ್ವತಿಗೆ ದಾನ ಮಾಡಿದ್ದಾರೆ.
ತಮ್ಮ ಹೆಸರಿಗೆ ಬಂದ ಒಂದು ತಿಂಗಳಲ್ಲಿ ಭೂಮಿಯನ್ನು ದಾನ ಮಾಡಿದ್ದಾರೆ. 2010ರ ನವೆಂಬರ್ ನಲ್ಲಿ ಯತೀಂದ್ರ ಅವರಿಗೆ ಭೂಮಿ ದಾನ ಮಾಡಲಾಗಿದೆ. ಪಾರ್ವತಿ ಅವರಿಂದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮತ್ತೆ ಭೂಮಿ ದಾನ ಮಾಡಲಾಗಿದೆ. ಈ ಭೂಮಿಯನ್ನು ಯತೀಂದ್ರ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. 2011 ರಲ್ಲಿ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಭೂಮಿ ಮಾರಾಟದ ದಾಖಲೆಯನ್ನು ಸ್ನೇಹಮಯಿ ಕೃಷ್ಣ ಇದೀಗ ಬಿಡುಗಡೆ ಮಾಡಿದ್ದಾರೆ. ದಾಖಲೆ ಸಮೇತ ಸದ್ಯ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.